ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ಮತ್ತು ಜಾಕ್ವಲೀನ್ ಫರ್ನಾಂಡಿಸ್ ಮತ್ತೆ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ. ಈ ಜೋಡಿ 2014ರಲ್ಲಿ ಬಿಡುಗಡೆಯಾಗಿದ್ದ ಕಿಕ್ ಚಿತ್ರದಲ್ಲಿ ನಟಿಸಿದ್ದರು.
ಎಬಿಸಿಡಿ 3 ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಜಾಕ್ವಲೀನ್ ಫರ್ನಾಂಡಿಸ್ ಒಟ್ಟಾಗಿ ಅಭಿನಯಿಸಲಿದ್ದಾರೆ ಎಂದು ತಿಳಿದಬಂದಿದೆ. ಚಿತ್ರವನ್ನು ರೆಮೋ ಡಿಸೋಜಾ ನಿರ್ದೇಶಿಸಲಿದ್ದು ಇದೊಂದು ನೃತ್ಯ ಕುರಿತಾದ ಚಿತ್ರವಾಗಲಿದೆ.
ಈ ಹಿಂದೆ ಎಬಿಸಿಡಿ ಮತ್ತು ಎಬಿಸಿಡಿ 2 ಚಿತ್ರಗಳು ಬಿಡುಗಡೆಯಾಗಿ ಯಶಸ್ಸು ಕಂಡಿದ್ದು ಇದೀಗ ಇದೇ ಸರಣಿಯ ಮೂರನೇ ಚಿತ್ರ ತೆರೆಗೆ ಬರಲಿದೆ. ಸದ್ಯ ಸಲ್ಮಾನ್ ಖಾನ್ ಟೈಗರ್ ಜಿಂದಾ ಹೈ ಚಿತ್ರದಲ್ಲಿ ನಟಿಸುತ್ತಿದ್ದು ಆ ಚಿತ್ರದ ಬಳಿಕ ಎಬಿಸಿಡಿ 3 ಚಿತ್ರದಲ್ಲಿ ನಟಿಸಲಿದ್ದಾರೆ.
ಚಿತ್ರದಲ್ಲಿ ಸಲ್ಮಾನ್ ಖಾನ್ ತನ್ನ ಮಗಳನ್ನು ನೃತ್ಯ ಸ್ಪರ್ಧೆಗೆ ಅಣಿ ಮಾಡುವ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಜಾಕ್ವಲೀನ್ ಫರ್ನಾಂಡಿಸ್ ನೃತ್ಯ ಶಿಕ್ಷಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.