50 ಲಕ್ಷಕ್ಕೆ ಬೇಡಿಕೆ: ಗ್ಯಾಂಗ್ ಲೀಡರ್‌ನಿಂದ ಮಹೇಶ್ ಭಟ್‌ಗೆ ಬೆದರಿಕೆ ಕರೆ

ಬಾಲಿವುಡ್ ಖ್ಯಾತ ನಿರ್ಮಾಪಕ ಮಹೇಶ್ ಭಟ್ ಗೆ ಆಗಂತುಕ ವ್ಯಕ್ತಿಯೊಬ್ಬ ಕರೆ ಮಾಡಿ 50 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಕೊಲ್ಲುವ...
ಮಹೇಶ್ ಭಟ್, ಅಲಿಯಾ ಭಟ್
ಮಹೇಶ್ ಭಟ್, ಅಲಿಯಾ ಭಟ್
ಬಾಲಿವುಡ್ ಖ್ಯಾತ ನಿರ್ಮಾಪಕ ಮಹೇಶ್ ಭಟ್ ಗೆ ಆಗಂತುಕ ವ್ಯಕ್ತಿಯೊಬ್ಬ ಕರೆ ಮಾಡಿ 50 ಲಕ್ಷ ರುಪಾಯಿಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ಕೊಲ್ಲುವ ಬೆದರಿಕೆ ಹಾಕಿದ್ದಾನೆ. 
ಕೇಳಿದಷ್ಟು ಹಣ ನೀಡಿದ್ದರೆ ನಿಮ್ಮ ಪುತ್ರಿ ಅಲಿಯಾ ಭಟ್ ಮತ್ತು ಪತ್ನಿ ಸೋನಿಯನ್ನು ಕೊಲ್ಲುವುದಾಗಿ ಆಗಂತುಕ ಕರೆ ಮಾಡಿ ಹೇಳಿದ್ದಾನೆ ಎಂದು ಮಹೇಶ್ ಭಟ್ ಪೊಲೀಸರಿಗೆ ದೂರು ನೀಡಿದ್ದಾರೆ. 
ಗ್ಯಾಂಗ್ ಲೀಡರ್ ಒಬ್ಬ ಮಹೇಶ್ ಭಟ್ ಅವರಿಗೆ ಕರೆ ಮಾಡಿ 50 ಲಕ್ಷ ರುಪಾಯಿ ನೀಡುವಂತೆ ಧಮ್ಕಿ ಹಾಕಿದ್ದಾನೆ ಎಂದು ಮುಂಬೈ ಪೊಲೀಸರು ಹೇಳಿದ್ದಾರೆ. 
ಫೆಬ್ರವರಿ 26ರಂದು ಬೆದರಿಕೆ ಕರೆ ಬಂದಿದ್ದರಿಂದ ಮೊದಲಿಗೆ ಮಹೇಶ್ ಭಟ್ ಅವರು ಯಾರೋ ಬೇಕೆಂತ ತಮಾಷೆ ಮಾಡಲು ಕರೆ ಮಾಡಿರಬಹುದು ಎಂದು ಭಾವಿಸಿದ್ದರು. ಕೆಲ ದಿನಗಳ ನಂತರ ಆತ ವಾಟ್ಸ್ ಆಪ್ ಸಂದೇಶವೊಂದನ್ನು ರವಾನಿಸಿದ್ದು ಅದರಲ್ಲಿ ತಮ್ಮ ಮಾತನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಹೇಳಿದ್ದರಿಂದ ಮಹೇಶ್ ಭಟ್ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com