ಚೇತನ್ ಭಗತ್ ಬರೆದ ಯಾವ ಪುಸ್ತಕವನ್ನು ಓದಿಲ್ಲ: ಅರ್ಜುನ್ ಕಪೂರ್

ಇಂಗ್ಲಿಷ್ ಲೇಖಕ ಚೇತನ್ ಭಗತ್ ಅವರ ಕಾದಂಬರಿಗಳನ್ನು ಅಳವಡಿಸಿಕೊಂಡು ಮಾಡಿರುವ ಎರಡು ಸಿನೆಮಾಗಳಲ್ಲಿ ಅರ್ಜುನ್ ಕಪೂರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಲೇಖಕನ ಯಾವ ಪುಸ್ತಕವನ್ನು
ಅರ್ಜುನ್ ಕಪೂರ್
ಅರ್ಜುನ್ ಕಪೂರ್
ಮುಂಬೈ: ಇಂಗ್ಲಿಷ್ ಲೇಖಕ ಚೇತನ್ ಭಗತ್ ಅವರ ಕಾದಂಬರಿಗಳನ್ನು ಅಳವಡಿಸಿಕೊಂಡು ಮಾಡಿರುವ ಎರಡು ಸಿನೆಮಾಗಳಲ್ಲಿ ಅರ್ಜುನ್ ಕಪೂರ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಲೇಖಕನ ಯಾವ ಪುಸ್ತಕವನ್ನು ಓದಿಲ್ಲ ಎಂದು ತಿಳಿಸುವ ನಟ, ನಿರ್ದೇಶಕನ ಕಲ್ಪನೆಯನ್ನು ಗ್ರಹಿಸಿ ಪಾತ್ರವನ್ನು ಪೋಷಿಸುವುದಾಗಿ ಹೇಳಿದ್ದಾರೆ. 
ನಟ ಈ ಹಿಂದೆ '೨ ಸ್ಟೇಟ್ಸ್' ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು ಮತ್ತು ಈಗ ಚೇತನ್ ಅವರ ಮತ್ತೊಂದು ಕಾದಂಬರಿ ಆಧಾರಿತ ಚಿತ್ರ 'ಹಾಫ್ ಗರ್ಲ್ ಫ್ರೆಂಡ್' ನಲ್ಲಿಯೂ ನಾಯಕ ನಟ. 
"ನನ್ನ ಜೀವನದಲ್ಲಿ ಚೇತನ್ ಭಗತ್ ಪುಸ್ತಕ ಓದಿಯೇ ಇಲ್ಲ. ಆದರೆ ಹೌದು ಅವರ ಎರಡು ಕಾದಂಬರಿಗಳನ್ನು ಅಳವಡಿಸಿಕೊಂಡಿರುವ ಸಿನೆಮಾಗಳಲ್ಲಿ ನಟಿಸಿದ್ದೇನೆ. ಇದು ನನಗೆ ತೊಂದರೆ ಎಂದೆನಿಸಲೇ ಇಲ್ಲ ಏಕೆಂದರೆ ನನ್ನ ನಿರ್ದೇಶಕರು ಓದುವಂತೆ ಸೂಚಿಸಲಿಲ್ಲ ಹಾಗು ಪಾತ್ರವನ್ನು ಚೆನ್ನಾಗಿ ಅರಿಯಲು ನನಗೆ ಸ್ಕ್ರಿಪ್ಟ್ ಸಾಕು. 
"ಎರಡೂ ಸಿನೆಮಾದಲ್ಲಿ ಸ್ಕ್ರಿಪ್ಟ್ ಬರೆಯುವುದಕ್ಕೆ ಚೇತನ್ ಭಾಗವಾಗಿದ್ದರಿಂದ, ಪಾತ್ರಗಳ ಪ್ರಮುಖತೆಯನ್ನು ಉಳಿಸಿಕೊಂಡಿರುವುದರ ಬಗ್ಗೆ ನನಗೆ ಭರವಸೆಯಿತ್ತು" ಎನ್ನುತ್ತಾರೆ. 
ಏಕ್ತಾ ಕಪೂರ್ ನಿರ್ಮಿಸಿರುವ ಮೋಹಿತ್ ಸೂರಿ ನಿರ್ದೇಶನದ 'ಹಾಫ್ ಗರ್ಲ್ ಫ್ರೆಂಡ್' ಮೇ ೧೯ ಕ್ಕೆ ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಶ್ರದ್ಧಾ ಕಪೂರ್ ಅರ್ಜುನ್ ಎದುರು ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com