ಎಲ್ಲಾ ಕಡೆ ಮಹಿಳೆಯರು ಲೈಂಗಿಕ ಕಿರುಕುಳಗೊಳಗಾಗುತ್ತಾರೆ: ಪ್ರಿಯಾಂಕಾ ಚೋಪ್ರಾ

ವಿವಾದಿತ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ನಂತವರು ಜಗತ್ತಿನಲ್ಲೆಡೆ ಇರುತ್ತಾರೆ, ಮಹಿಳೆಯರು ಎಲ್ಲಾ ಸ್ಥಳಗಳಲ್ಲಿಯೂ ....
ನಟಿ ಪ್ರಿಯಾಂಕಾ ಚೋಪ್ರಾ
ನಟಿ ಪ್ರಿಯಾಂಕಾ ಚೋಪ್ರಾ
Updated on: 
ಲಾಸ್ ಏಂಜಲೀಸ್: ವಿವಾದಿತ ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್ಸ್ಟೈನ್ ನಂತವರು ಜಗತ್ತಿನಲ್ಲೆಡೆ ಇರುತ್ತಾರೆ, ಮಹಿಳೆಯರು ಎಲ್ಲಾ ಸ್ಥಳಗಳಲ್ಲಿಯೂ ಲೈಂಗಿಕ ಕಿರುಕುಳಕ್ಕೊಳಗಾಗುತ್ತಾರೆ ಎಂದು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.
2017ರ ಮೇರಿ ಕ್ಲೇರ್ ಪವರ್ ಟ್ರಿಪ್ ನಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ ಪ್ರಿಯಾಂಕಾ ಚೋಪ್ರಾ ವೈನ್ಸ್ಟೈನ್ ಮತ್ತು ಮಹಿಳಾ ಸಬಲೀಕರಣ ಕುರಿತು ಮಾತನಾಡಿದ್ದಾರೆ ಎಂದು ಮಾರಿಕ್ಲೇರ್.ಕಾಂ ವರದಿ ಮಾಡಿದೆ.
ವೈನ್ಸ್ಟೈನ್ ನಂತವರು ಭಾರತದಲ್ಲಿದ್ದಾರೆಯೇ ಎಂದು ಸಂದರ್ಶನದಲ್ಲಿ ಕೇಳಿದಾಗ ಪ್ರಿಯಾಂಕಾ, ಹಾಲಿವುಡ್ ನಲ್ಲಿ ಹಾಲಿವುಡ್ ನಲ್ಲಿ ಹಾರ್ವೆ ವೈನ್ಸ್ಟೈನ್ ಮಾತ್ರ ಆ ರೀತಿಯವರು ಇದ್ದಾರೆ ಎಂದು ನನಗನಿಸುವುದಿಲ್ಲ. ಇಂತಹ ಸಂಗತಿಗಳು, ವಿಷಯಗಳು ಹಾಲಿವುಡ್ ನಲ್ಲಿ ಇನ್ನಷ್ಟು ಹೊರಬರಬೇಕಿದೆ.
ಇಂತಹ ಪ್ರಕರಣಗಳು ಕೇವಲ ಭಾರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಆಗುತ್ತದೆ. ಇದು ಮಹಿಳೆಯರ ಶಕ್ತಿಯನ್ನು ಪುರುಷರು ಕುಂದಿಸಲು ಪುರುಷರು ಮಾಡುವ ಪ್ರಯತ್ನ. ಇದು ತಾವು ಶಕ್ತಿಯುತರು ಎಂದು ತೋರಿಸಿಕೊಳ್ಳಲು ಪುರುಷರು ಮಾಡುವ ಪ್ರಯತ್ನವಾಗಿದೆ.
ಹಾಲಿವುಡ್ ನಿರ್ಮಾಪಕ ವೈನ್ಸ್ಟೈನ್ ವಿರುದ್ಧ ಸುಮಾರು 40 ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಅವರಲ್ಲಿ ಹಾಲಿವುಡ್ ನ ಪ್ರಮುಖ ನಟಿಯರಾದ ಆಂಜೆಲಿನಾ ಜೂಲಿ, ಗ್ವಿನೆತ್ ಪಾಲ್ಟ್ರೋ, ಕಾರಾ ಡೆಲಿವಿಂಗ್ನೆ, ಲುಪಿಟಾ ನೈವೊಂಗ್ ಕೂಡ ಪ್ರಮುಖರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com