ನಾನು ಕತ್ರೀನಾ, ದೀಪಿಕಾರೊಡನೆ ನಟಿಸಲು ಸದಾ ಸಿದ್ದ, ನಟಿಯರಿಗೆ ಜಾಬ್ ಅಪ್ಲಿಕೇಷನ್ ಕಳಿಸಿದ ಬಿಗ್ ಬಿ ಅಮಿತಾಬ್ ಬಚ್ಚನ್
ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಜತೆ ನಟಿಸುವ ಬಯಕೆಯಾಗಿದೆ. ಇದಕ್ಕಾಗಿ ಆವರು ತಮ್ಮ ಟ್ವಿಟ್ಟ್ರ ನಲ್ಲಿ ಆನ್ ಲೈನ್ ಜಾಬ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ.
ನಾನು ಕತ್ರೀನಾ, ದೀಪಿಕಾರೊಡನೆ ನಟಿಸಲು ಸದಾ ಸಿದ್ದನಿದ್ದೇನೆ: ಬಿಗ್ ಬಿ ಅಮಿತಾಬ್ ಬಚ್ಚನ್
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ಕತ್ರೀನಾ ಕೈಫ್ ಹಾಗೂ ದೀಪಿಕಾ ಪಡುಕೋಣೆ ಜತೆ ನಟಿಸುವ ಬಯಕೆಯಾಗಿದೆ. ಇದಕ್ಕಾಗಿ ಆವರು ತಮ್ಮ ಟ್ವಿಟ್ಟ್ರ ನಲ್ಲಿ ಆನ್ ಲೈನ್ ಜಾಬ್ ಅಪ್ಲಿಕೇಷನ್ ಸಲ್ಲಿಸಿದ್ದಾರೆ.
ಆಂಗ್ಲ ಪತ್ರಿಕೆಯೊಂದು ದೀಪಿಕಾ ಹಾಗೂ ಕತ್ರೀನಾ ಅವರುಗಳು ಶಾಹಿದ್ ಕಪೂರ್ ಮತ್ತು ಅಮಿರ್ ಖಾನ್‍ಗಿಂತ ಎತ್ತರವಾಗಿದ್ದಾರೆ, ಹೀಗಾಗಿ ಚಿತ್ರೀಕರಣದ ವೇಳೆ ನಿರ್ದೇಶಕರು ಈ ನಟಿಯರ ಎತ್ತರವನ್ನು ಮರೆ ಮಾಚಲು ಸಾಹಸ ಪಡಬೇಕಾಗುತ್ತದೆ ಎಂದು ಸುದ್ದಿ ಪ್ರಕಟಿಸಿತ್ತು. ಬಿಗ್ ಬಿ ಅಮಿತಾಬ್ ತಾವು ಆ ಪತ್ರಿಕೆಯ ತುಣುಕನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಲ್ಲದೆ "ನಾನು ಕತ್ರೀನಾ ಹಾಘೂ ದೀಪಿಕಾಗಿಂತ ಎತ್ತರವಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ ಬಿಗ್ ಬಿ ಅಮಿತಾಬ್ ಹೆಸರು, ವಯಸ್ಸು, ಕೆಲಸದ ಅನುಭವ, ಭಾಷೆ ಹೀಗೆ ನಾನಾ ವಿವರಗಳನ್ನು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು ಕಡೆಯಲ್ಲಿ 'ನಾನು ನಿಮಗಿಂತ ಎತ್ತರವಿದ್ದು ನಿಮ್ಮೊಡನೆ ನಟಿಸಲು ಸದಾ ಸಿದ್ದನಿದ್ದೇನೆ' ಎಂದಿದ್ದಾರೆ.
T 2617 - Job Application : Name : Amitabh Bachchan DOB : 11.10.1942, Allahabad Age : 76 yrs Credentials : worked in films for 49 years , IN APPROX 200 FILMS Speaks ; Hindi, English, Punjabi, Bengali
ಇತ್ತೀಚೆಗೆ ತೆರೆಕಂಡ ಪದ್ಮಾವತ್ ನಲ್ಲಿ ಅದ್ಭುತವಾಗಿ ನಟಿಸಿ ಮನೆಮಾತಾಗಿರುವ ನಟಿ ದೀಪಿಕಾ ಪಡುಕೋಣೆ 5.85 ಅಡಿ (174 ಸೆಂ.ಮೀ) ಎತ್ತರವಿದ್ದಾರೆ. ಇನ್ನು ಕತ್ರೀನಾ ಕೈಫ್ 173 ಸೆಂ.ಮೀ.ಎತ್ತರವಿದ್ದಾರೆ. ಶಾಹೀದ್ ಹಾಗೂ ಅಮೀರ್ ಕ್ರಮವಾಗಿ 174 ಹಾಗೂ 168 ಸೆಂ.ಮೀ ಇದ್ದಾರೆ.
ಅಮಿತಾಬ್ ಬಚ್ಚನ್ ಈ ಹಿಂದೆ ದೀಪಿಕಾ ಪಡುಕೋಣೆ ಅವರೊಡನೆ ಪೀಕು ಮತ್ತು ಆರಕ್ಷಣ್ ಚಿತ್ರದಲ್ಲಿ ನಟಿಸಿದ್ದು ಪೀಕು ಚಿತ್ರದಲ್ಲಿನ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.