ಮುಂಬೈ: ಶನಿವಾರದಂದು ದುಬೈನಲ್ಲಿ ಮೃತಪಟ್ಟ ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪಾರ್ಥಿವ ಶರೀರವಿದ್ದ ವಿಮಾನ ಮುಂಬೈಗೆ ಆಗಮಿಸಿದೆ.
ಶ್ರೀದೇವಿ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಇದಾಗಲೇ ವಿಮಾನ ನಿಲ್ದಾಣದಲ್ಲಿ ನೆರೆದಿದ್ದು ನಿಲ್ದಾಣ ಹಾಗೂ ಸುತ್ತ ಮುತ್ತಲ ಪ್ರದೇಶದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಶ್ರೀದೇವಿ ಮೃತದೇಹವನ್ನು ಪಡೆದುಕೊಳ್ಳಲು ಅನಿಲ್ ಕಪೂರ್ ಹಾಗೂ ಸೋನಂ ಕಪೂರ್ ಆಗಮಿಸಿದ್ದು ವಿಮಾನ ನಿಲ್ದಾಣದ ಗೇಟ್ ನಂ.8ರ ಮೂಲಕ ದೇಹವನ್ನು ಬೋನಿ ಕಪೂರ್ ಮನೆಗೆ ತೆಗೆದುಕೊಂಡು ಹೋಗಲಾಗುತ್ತದೆ.
ಶ್ರೀದೇವಿ ಶರೀರವನ್ನು ಅನಿಲ್ ಅಂಬಾನಿಯವರ ವಿಶೇಷ ವಿಮಾನದಲ್ಲಿ ದುಬೈನಿಂದ ತರಲಾಗಿದ್ದು ಅನಿಲ್ ಅಂಬಾನಿ, ಟೀನಾ ಅಂಬಾನಿ, ಶ್ರೀದೇವಿ ಕುಟುಂಬ ಸದಸ್ಯರುಗಳು ವಿಮಾನ ನಿಲ್ದಾಣದಲ್ಲಿ ಹಾಜರಿದ್ದರು.
ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ಬುಧವಾರ ಬೆಳಿಗ್ಗೆ ವ್ಯವಸ್ಥೆ ಕಲ್ಪಿಸಲಾಗಿದ್ದು ಸಂಜೆ ಅಂತಿಮ ಸಂಸ್ಕಾರದ ವಿಧಿಗಳು ನಡೆಯಲಿದೆ.