ಬಿಗ್ ಬಾಸ್-11 ಟ್ರೋಫಿ ಗೆದ್ದ ಶಿಲ್ಪಾ ಶಿಂಧೆ

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಂದಿಯ ಬಿಗ್ ಬಾಸ್ 11 ಆವೃತ್ತಿಯ ವಿಜೇತೆಯಾಗಿ ...
ನಟಿ ಶಿಲ್ಪಾ ಶಿಂಧೆ
ನಟಿ ಶಿಲ್ಪಾ ಶಿಂಧೆ
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಹಿಂದಿಯ ಬಿಗ್ ಬಾಸ್ 11 ಆವೃತ್ತಿಯ ವಿಜೇತೆಯಾಗಿ ಶಿಲ್ಪಾ ಶಿಂಧೆ ಹೊರಹೊಮ್ಮಿದ್ದಾರೆ. 
ಭಾಬಿ ಜಿ ಘರ್ ಹೈ ಧಾರವಾಹಿ ಮೂಲಕ ಖ್ಯಾತಿ ಗಳಿಸಿದ್ದ ಶಿಲ್ಪಾ ಶಿಂಧೆ ಬಿಗ್ ಬಾಸ್ ಟ್ರೋಫಿ ಜೊತೆಗೆ 45 ಲಕ್ಷ ರೂಪಾಯಿ ಬಹುಮಾನ ಗೆದ್ದುಕೊಂಡರು.
ಯೆ ರಿಶ್ತಾ ಕ್ಯಾ ಕೆಹ್ಲಾತಾ ಹೈನ್ ಖ್ಯಾತಿಯ ನಟಿ ಹೀನಾ ಖಾನ್ ಮೊದಲ ರನ್ನರ್ ಆಗಿ ಹೊರಹೊಮ್ಮಿದ್ದಾರೆ.
ನಿನ್ನೆ ನಡೆದ ಗ್ರಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ನಿರೂಪಕ ಬಾಲಿವುಡ್ ನಟ ಸಲ್ಮಾನ್ ಖಾನ್ ವಿಜೇತರನ್ನು ಘೋಷಿಸುವುದಕ್ಕೆ ಮೊದಲೇ ಟ್ವೀಟಿಗರು ಶಿಲ್ಪಾ ತಮ್ಮ ಇಷ್ಟದ ಸ್ಪರ್ಧಿಯಾಗಿದ್ದು ಆಕೆಯೇ ವಿಜೇತೆ ಎಂದು ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಗಿಯುವ ಮುನ್ನವೇ ಟ್ವೀಟ್ ಮಾಡಿದ್ದರು. 
ಅಂತಿಮ ಹಂತಕ್ಕೆ ಹೀನಾ ಖಾನ್, ವಿಕಾಸ್ ಗುಪ್ತಾ, ಶಿಲ್ಪಾ ಶಿಂಧೆ ಮತ್ತು ಪುನೀಶ್ ಶರ್ಮ ಪ್ರವೇಶಿಸಿದ್ದರು. ಎರಡನೇ ರನ್ನರ್ ಅಪ್ ಆಗಿ ವಿಕಾಸ್ ಗುಪ್ತಾ ಆಯ್ಕೆಯಾಗಿದ್ದಾರೆ.
ಹಲವು ಕಾರಣಗಳಿಗೆ ಬಿಗ್ ಬಾಸ್ 11 ವಿವಾದ ಹುಟ್ಟುಹಾಕಿತ್ತು. ಶಿಲ್ಪಾ ಮತ್ತು ವಿಕಾಸ್ ಗುಪ್ತಾ ನಡುವಿನ ಜಗಳ ಸಾಕಷ್ಟು ವಿವಾದಕ್ಕೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿತ್ತು. 
ಅಕ್ಟೋಬರ್ 1ರಂದು ಆರಂಭವಾಗಿದ್ದ ರಿಯಾಲಿಟಿ ಶೋ ನಿನ್ನೆ ಮುಕ್ತಾಯವಾಯಿತು. 
ಬಿಗ್ ಬಾಸ್ 11 ರ ಫಿನಾಲೆ ಕಾರ್ಯಕ್ರಮಕ್ಕೆ ನಟ ಅಕ್ಷಯ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಒಟ್ಟು 19 ಮಂದಿ ಸ್ಪರ್ಧಿಗಳು ಬಿಗ್ ಬಾಸ್ 11ರಲ್ಲಿ ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com