ಬಾಲಿವುಡ್ ಹಿರಿಯ ನಟಿ ರೀಟಾ ಭಾದುರಿ ಇನ್ನಿಲ್ಲ

: ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ನಿಧನರಾಗಿದ್ದಾರೆ. 62 ವರ್ಷದ ಅವರು ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು ..
ರೀಟಾ ಬಾಧುರಿ
ರೀಟಾ ಬಾಧುರಿ
Updated on: 
ನವದೆಹಲಿ: ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ನಿಧನರಾಗಿದ್ದಾರೆ. 62 ವರ್ಷದ ಅವರು ಮೂತ್ರ ಪಿಂಡ ಸಮಸ್ಯೆಯಿಂದ ಬಳಲುತ್ತಿದ್ದರು 
ನಟ ಶಿಶಿರ್‌ ಶರ್ಮಾ ಅವರು ಫೇಸ್‌ಬುಕ್‌ನಲ್ಲಿ ನೋವಿನ ವಿಚಾರವನ್ನು ಬರೆದುಕೊಂಡಿದ್ದು, ಜೂನ್‌ 17 ರಂದು ಅಂಧೇರಿ ಪೂರ್ವದ ಪಾರ್ಸಿವಾಡಾ ರಸ್ತೆಯ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.. 
70 ರಿಂದ 90 ರ ದಶಕದಲ್ಲಿ ಹಲವು ಬಾಲಿವುಡ್‌ ಚಿತ್ರಗಳಲ್ಲಿ ರೀಟಾ ಅವರು ನಟಿಸಿದ್ದರು. ಸಾವನ್‌ ಕೋ ಆನೆ ದೋ, ರಾಜಾ, ಹಿಟ್‌ ಚಿತ್ರಗಳು  ರಾಜಾ ನಟನೆಗಾಗಿ ಫಿಲ್ಮ್ ಫೇರ್‌ ಪ್ರಶಸ್ತಿಗೆ ಭಾಜನರಾಗಿದ್ದರು.  70 ಕ್ಕೂ ಹೆಚ್ಚು ಚಿತ್ರಗಳು ಮತ್ತು ಕಿರುತೆರೆಯಲ್ಲೂ ಬಣ್ಣ ಹಚ್ಚಿದ್ದರು. 
ಕಳೆದ 2 ವಾರಗಳಿಂದ ಜುಹುವಿನ ಸುಜಾಯ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com