ಪತ್ನಿಯ ಫೋನ್ ಕಾಲ್ ಡಾಟಾ ದಾಖಲೆ ಸೋರಿಕೆ: ನಟ ನವಾಜುದ್ದಿನ್ ಸಿದ್ಧಿಕಿಗೆ ಪೊಲೀಸ್ ಸಮನ್ಸ್

ಫೋನ್ ಕಾಲ್ ಡಾಟಾ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆ ಕ್ರೈಂ ಬ್ರಾಂಚ್ ಅಧಿಕಾರಿಗಳು ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿಗೆ ಸಮನ್ಸ್ ಜಾರಿ ಮಾಡಿದ್ದಾರೆ...
ನವಾಜುದ್ದೀನ್ ಸಿದ್ದಿಕಿ
ನವಾಜುದ್ದೀನ್ ಸಿದ್ದಿಕಿ
ಥಾಣೆ: ಫೋನ್ ಕಾಲ್ ಡಾಟಾ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಥಾಣೆ ಕ್ರೈಂ ಬ್ರಾಂಚ್ ಅಧಿಕಾರಿಗಳು ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಪತ್ನಿಗೆ ಸಮನ್ಸ್ ಜಾರಿ ಮಾಡಿದ್ದಾರೆ. 
ಥಾಣೆ ಕ್ರೈಂ ಬ್ರಾಂಚ್ ಪೊಲೀಸರು ಫೋನ್ ಕಾಲ್ ಡಾಟಾ ದಂಧೆಗೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿತ್ತು. ಈ ವೇಳೆ ಆರೋಪಿಯೊಬ್ಬ ವಕೀಲ ರಿಜ್ವಾನ್ ಸಿದ್ಧಿಕಿ ಎಂಬುವರು ನಟ ನವಾಜುದ್ದೀನ್ ಸಿದ್ದಿಕಿ ಅವರ ಪತ್ನಿಯ ಫೋನ್ ಕಾಲ್ ಡಾಟಾವನ್ನು ಖಾಸಗಿ ಪತ್ತೆದಾರರ ಮೂಲಕ ಪಡೆಯುತ್ತಿದ್ದರು ಎಂದು ಹೇಳಿದ್ದು ಈ ಹಿನ್ನೆಲಯಲ್ಲಿ ನಟ ಹಾಗೂ ಆತನ ಪತ್ನಿಗೆ ಹೆಚ್ಚಿನ ವಿಚಾರಣೆಗಾಗಿ ಸಮನ್ಸ್ ನೀಡಲಾಗಿದೆ. 
ಫೋನ್ ಕಾಲ್ ಡಾಟಾ ಲೀಕ್ ಮಾಡುತ್ತಿದ್ದ ಬಹುದೊಡ್ಡ ಜಾಲವನ್ನು ಕ್ರೈಂ ಬ್ರಾಂಚ್ ಪೊಲೀಸರು ಪತ್ತೆ ಹಚ್ಚಿದ್ದರು. ಈ ಸಂಬಂಧ 11 ಮಂದಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವಕೀಲ ರಿಜ್ವಾನ್ ಸಿದ್ದಿಕಿ ನಟ ನವಾಜುದ್ದೀನ್ ಸಿದ್ದಿಕಿ ಪತ್ನಿಯ ಕಾಲ್ ಡಾಟಾವನ್ನು ಪಡೆದಿರುವುದಾಗಿ ತಿಳಿದುಬಂದಿದೆ ಎಂದು ಉಪ ಪೊಲೀಸ್ ಆಯುಕ್ತ ಅಭಿಶೇಕ್ ತ್ರಿಮುಖಿ ತಿಳಿಸಿದ್ದಾರೆ. 
ಇನ್ನು ಭಾರತದ ಮೊದಲ ಖಾಸಗಿ ಪತ್ತೆದಾರಿ ಮಹಿಳೆ ಎಂಬ ಖ್ಯಾತಿಗೆ ಭಾಜನರಾಗಿದ್ದ ರಂಜನಿ ಪಂಡಿತ್ ರನ್ನು ಕಳೆದ ಫೆಬ್ರವರಿ ತಿಂಗಳಲ್ಲಿ ಬಂಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com