ಮೇ 8ಕ್ಕೆ ಸೋನಂ ಕಪೂರ್ - ಆನಂದ್ ಅಹುಜಾ ಮದುವೆ, ಇದು ಅಧಿಕೃತ

ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅವರ ಪುತ್ರಿ, ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಬಹು...
ಸೋನಂ ಕಪೂರ್, ಆನಂದ್ ಅಹುಜಾ
ಸೋನಂ ಕಪೂರ್, ಆನಂದ್ ಅಹುಜಾ
ಮುಂಬೈ: ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅವರ ಪುತ್ರಿ, ಬಾಲಿವುಡ್ ನಟಿ ಸೋನಂ ಕಪೂರ್ ಅವರು ತಮ್ಮ ಬಹು ದಿನಗಳ ಗೆಳಯ ಆನಂದ್ ಅಹುಜಾರೊಂದಿಗೆ  ಸಪ್ತಪದಿ ತುಳಿಯುವುದು ಈಗ ಖಚಿತವಾಗಿದೆ.
ಇಷ್ಟು ದಿನ ಹಾಯಾಗಿ ಡೇಟಿಂಗ್ ನಡೆಸುತ್ತಾ ಕಾಲ ಕಳೆಯುತ್ತಿದ್ದ ಈ ಜೋಡಿ ಮೇ 8ರಂದು ದಾಂಪತ್ಯ ಜೀವನಕ್ಕೆ ಕಾಲಿಡುವುದು ಪಕ್ಕಾ ಆಗಿದೆ.  ಈಗಾಗಲೇ ಕಪೂರ್ ಕುಟುಂಬದ ಮನೆಯಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ.
ಈ ಸಂಬಂಧ ಕಪೂರ್ ಮತ್ತು ಅಹುಜಾ ಕುಟುಂಬ ಜಂಟಿಯಾಗಿ ಪತ್ರಿಕಾ ಪ್ರಕಟಣೆ ನೀಡಿದ್ದು, ಸೋನಂ ಮತ್ತು ಆನಂದ್ ಮದುವೆ ವಿಷಯ ತಿಳಿಸಲು ತುಂಬಾ ಖುಷಿಯಾಗುತ್ತಿದೆ. ಮೇ 8ರಂದು ಮುಂಬೈನಲ್ಲಿ ಮದುವೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಇದು ಒಂದು ನಿಕಟ ಸಂಬಂಧವಾಗಿದ್ದು, ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸಬೇಕು ಎಂದು ನಿಮ್ಮ ವಿನಂತಿಸುತ್ತೇವೆ. ನಿಮ್ಮ ಮತ್ತು ಮತ್ತು ಆರ್ಶೀವಾದಕ್ಕೆ ಧನ್ಯವಾದಗಳು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಹಿಂದೆ ಸೋನಂ ಕಪೂರ್ ಅವರು ಮೇ 9 ರಂದು ಮದುವೆಯಾಗುತ್ತಾರೆ ಮತ್ತು ಮೇ 12ರಂದು ಮದುವೆಯಾಗುತ್ತರೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ರೀತಿ ವಿದೇಶದಲ್ಲಿ ಮದುವೆಯಾಗುತ್ತಾರೆ ಎಂದೆಲ್ಲಾ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದೀಗ ಆ ಎಲ್ಲಾ ವದಂತಿಗಳಿಗೆ ತೆರೆ ಎಳೆಯಲಾಗಿದ್ದು, ಮೇ 8ರಂದು, ಮುಂಬೈನಲ್ಲೇ ಮದುವೆಯಾಗುತ್ತಾರೆ ಎಂದು ಕುಟುಂಬ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com