ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮರಾಠಿ ನಟಿ!

ಪವಿತ್ರ ರಿಶ್ತಾ ಧಾರವಾಹಿಯಲ್ಲಿ ಅಭಿನಯಿಸಿರುವ ಖ್ಯಾತ ಮರಾಠಿ ನಟಿ ಪ್ರಾರ್ಥನಾ ಬೆಹೆರೆ ಅವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ...
ಪ್ರಾರ್ಥನಾ ಬೆಹೆರೆ
ಪ್ರಾರ್ಥನಾ ಬೆಹೆರೆ
Updated on: 
ಪವಿತ್ರ ರಿಶ್ತಾ ಧಾರವಾಹಿಯಲ್ಲಿ ಅಭಿನಯಿಸಿರುವ ಖ್ಯಾತ ಮರಾಠಿ ನಟಿ ಪ್ರಾರ್ಥನಾ ಬೆಹೆರೆ ಅವರು ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಪ್ರಾರ್ಥನಾ ಅವರು ಪ್ರಯಾಣಿಸುತ್ತಿದ್ದ ಕಾರಿಗೆ  ಟೆಂಪೊ ಮುಖಾಮುಖಿಯಾಗಬೇಕಿತ್ತು. ಇದನ್ನು ತಪ್ಪಿಸುವ ಭರದಲ್ಲಿ ಕಾರನ್ನು ಸೈಡಿಗೆ ಎಳೆದಿದ್ದು ಈ ವೇಳೆ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಾರ್ಥನಾ ಅವರ ಕಾಲು ಮತ್ತು ಕೈಗೆ ಗಂಭೀರ ಗಾಯಗಳಾಗಿವೆ. 
ಮುಂಬೈನ ಕಾರ್ಲಾದಲ್ಲಿ ಈ ಅಪಘಾತ ಸಂಭವಿಸಿದೆ. ಇನ್ನು ಸಹ ನಟ ಅನಿಕೇತ್ ವಿಶ್ವಾಸ್ ರಾವ್ ಸಹ ಪ್ರಾರ್ಥನಾ ಜತೆ ಪ್ರಯಾಣಿಸುತ್ತಿದ್ದು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 
ಧಾರವಾಹಿಗಳಲ್ಲಿ ನಟಿಸಿರುವ ಪ್ರಾರ್ಥನಾ ಅವರು ಮರಾಠಿ ಚಿತ್ರವೊಂದರಲ್ಲಿ ನಾಯಕಿಯಾಗಿ ನಟಿಸಿದ್ದು ಇನ್ನಷ್ಟೇ ಚಿತ್ರ ಬಿಡುಗಡೆಯಾಗಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com