ಸ್ವಯಂವರ ವಿವಾಹ ಮುರಿದುಬಿದ್ದ ನಂತರ ಮತ್ತೆ ಮದುವೆಯಾಗಲು ಮನಸ್ಸು ಮಾಡಿದ ರಾಖಿ ಸಾವಂತ್!

ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಸ್ವಯಂಪರ ವಿವಾಹವಾಗಿ ಅದು ಮುರಿದುಬಿದ್ದ ಹಲವು ವರ್ಷಗಳ ನಂತರ ಇದೀಗ ಮತ್ತೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ...
ದೀಪಕ್ ಕಲಾಲ್-ರಾಖಿ ಸಾವಂತ್
ದೀಪಕ್ ಕಲಾಲ್-ರಾಖಿ ಸಾವಂತ್
ಬಾಲಿವುಡ್ ಹಾಟ್ ಬೆಡಗಿ ರಾಖಿ ಸಾವಂತ್ ಸ್ವಯಂಪರ ವಿವಾಹವಾಗಿ ಅದು ಮುರಿದುಬಿದ್ದ ಹಲವು ವರ್ಷಗಳ ನಂತರ ಇದೀಗ ಮತ್ತೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ. 
ತಾನು ಮದುವೆಯಾಗುತ್ತಿರುವ ವಿಷಯವನ್ನು ಸ್ವತಃ ರಾಖಿ ಸಾವಂತ್ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಡಿಸೆಂಬರ್ 31ರಂದು ಅಮೆರಿಕದ ಲಾಸ್ ಎಂಜಲ್ಸ್ ನಲ್ಲಿ ದೀಪಕ್ ಕಲಾಲ್ ಎಂಬಾತನೊಂದಿಗೆ ತಾವು ಮದುವೆಯಾಗುತ್ತಿರುವುದಾಗಿ ವಿವಾದಿತ ಬೆಡಗಿ ರಾಖಿ ತಿಳಿಸಿದ್ದಾರೆ. 
ಇನ್ ಸ್ಟಾಗ್ರಾಮ್ ಪೋಸ್ಟ್ ನಲ್ಲಿ ರಾಖಿ, ನಾನು ಮದುವೆಯಾಗುತ್ತಿರುವುದು ನಿಜ. ಮದುವೆಯಾಗುತ್ತಿರುವುದಕ್ಕೆ ಖುಷಿಯಾಗುತ್ತಿದೆ ಎಂದು ವಿವಾಹ ಆಮಂತ್ರಣ ಪತ್ರಿಕೆಯೊಂದನ್ನು ಪೋಸ್ಟ್ ಮಾಡಿದ್ದಾರೆ. 
ಇನ್ನು ತಮ್ಮ ಮದುವೆಗೆ ಬಾಲಿವುಡ್ ನಟ ಶಾರುಖ್ ಖಾನ್, ಕರಣ್ ಜೋಹರ್ ಮತ್ತು ಕುಸ್ತಿಪಟು ಗ್ರೇಟ್ ಖಲಿ ಸಹ ಬರುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com