ತನುಶ್ರೀ ದತ್ತಾ ಹೇಳುತ್ತಿರುವುದು ಶುದ್ಧ ಸುಳ್ಳು; ನಾನಾ ಪಾಟೇಕರ್

2008ರಲ್ಲಿ ಚಿತ್ರೀಕರಣ ಸೆಟ್ ನಲ್ಲಿ ನಟಿ ತನುಶ್ರೀ ದತ್ತಾ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪವನ್ನು ...
ನಾನಾ ಪಾಟೇಕರ್-ತನುಶ್ರೀ ದತ್ತಾ
ನಾನಾ ಪಾಟೇಕರ್-ತನುಶ್ರೀ ದತ್ತಾ
Updated on

ಮುಂಬೈ: 2008ರಲ್ಲಿ ಚಿತ್ರೀಕರಣ ಸೆಟ್ ನಲ್ಲಿ ನಟಿ ತನುಶ್ರೀ ದತ್ತಾ ಜೊತೆ ಅನುಚಿತವಾಗಿ ವರ್ತಿಸಿರುವ ಆರೋಪವನ್ನು ಬಾಲಿವುಡ್ ನಟ ನಾನಾ ಪಾಟೇಕರ್ ನಿರಾಕರಿಸಿದ್ದು, ಆಕೆ ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ.

10 ವರ್ಷಗಳ ಹಿಂದೆ ಹಾರ್ನ್ ಓಕೆ ಪ್ರೀಸ್ ಎಂಬ ವಿಶೇಷ ಹಾಡಿನ ಚಿತ್ರೀಕರಣದ ವೇಳೆ ನಾನಾ ಪಾಟೇಕರ್ ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ತನುಶ್ರೀ ದತ್ತಾ ಇತ್ತೀಚೆಗೆ ಟಿವಿ ಸಂದರ್ಶನವೊಂದರಲ್ಲಿ ಆರೋಪಿಸಿದ್ದರು.

ನಾನಾ ಪಾಟೇಕರ್ ಇದೀಗ ಜೋಧ್ ಪುರದಲ್ಲಿ ಹೌಸ್ ಫುಲ್ 4 ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನಿದನ್ನು 10 ವರ್ಷಗಳ ಹಿಂದೆಯೇ ಹೇಳಿದ್ದೇನೆ. ಸುಳ್ಳು ಯಾವತ್ತಿದ್ದರೂ ಸುಳ್ಳೇ ಎಂದರು. ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವೇಳೆ ಈ ಪ್ರತಿಕ್ರಿಯೆ ನೀಡಿದ್ದಾರೆ.

ನೀವು ಈ ಆರೋಪ ಕುರಿತಂತೆ ಯಾಕೆ ಮೌನವಾಗಿದ್ದೀರಿ ಎಂದು ಸುದ್ದಿಗಾರರು ಕೇಳಿದಾಗ, ಯಾವ ಪ್ರಶ್ನೆಗೂ ಉತ್ತರಿಸದೆ ಸುಮ್ಮನಿರುವುದು ಉತ್ತಮ ಎಂದರು. ನಾನಾ ಪಾಟೇಕರ್ ಅವರು ನಾಡಿದ್ದು 8ರಂದು ಮಾಧ್ಯಮವನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.
ನಾನಾ ಪಾಟೇಕರ್ ಅವರ ಪರ ವಕೀಲರು ಈಗಾಗಲೇ ತನುಶ್ರೀ ದತ್ತಾ ಅವರಿಗೆ ನೊಟೀಸ್ ಜಾರಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com