ಮಿಟೂ: ಲೈಂಗಿಕ ಕಿರುಕುಳ ಆರೋಪ ನಿರಾಕರಿಸಿದ ಸುಶಾಂತ್ ಸಿಂಗ್ ರಜಪೂತ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೇಲೆ ಕೂಡ ಇದೀಗ ಲೈಂಗಿಕ ಕಿರುಕುಳ ಆರೋಪ ...
ಸುಶಾಂತ್ ಸಿಂಗ್ ರಜಪೂತ್
ಸುಶಾಂತ್ ಸಿಂಗ್ ರಜಪೂತ್
Updated on: 

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮೇಲೆ ಕೂಡ ಇದೀಗ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ. ಕಿಜಿ ಔರ್ ಮನ್ನಿ ಸಿನಿಮಾದ ಸಹ ನಟಿ ಸಂಜನಾ ಸಂಘಿ ಸುಶಾಂತ್ ಸಿಂಗ್ ಮೇಲೆ ಆರೋಪ ಮಾಡಿದ್ದಾರೆ. ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಸುಶಾಂತ್ ಸಿಂಗ್ ತಮ್ಮಿಬ್ಬರ ನಡುವಿನ ಸಂಭಾಷಣೆಯ ಸ್ಕ್ರೀನ್ ಶಾಟ್ ತೆಗೆದು ಹಾಕಿದ್ದು ಇದೊಂದು ಕೇವಲ ಪ್ರಚಾರಕ್ಕಾಗಿಯಷ್ಟೆ ಎಂದು ಆರೋಪಿಸಿದ್ದಾರೆ.

ಚಿತ್ರದ ಮೊದಲ ದಿನದಿಂದ ಕೊನೆಯ ದಿನದವರೆಗೆ ತಮ್ಮಿಬ್ಬರ ನಡುವೆ ನಡೆದ ಸಂಭಾಷಣೆಯನ್ನು ಹಂಚಿಕೊಂಡಿರುವ ಸುಶಾಂತ್ ಸಿಂಗ್, ನನ್ನ ಖಾಸಗಿ ವಿಚಾರಗಳನ್ನು ಬಹಿರಂಗಪಡಿಸುತ್ತಿರುವುದಕ್ಕೆ ನನಗೆ ತೀವ್ರ ಬೇಸರವಾಗುತ್ತಿದೆ. ಹಾಗೆಂದು ಈ ಬಗ್ಗೆ ಸ್ಪಷ್ಟನೆ ನೀಡಲು ನನಗೆ ಬೇರೆ ಮಾರ್ಗ ಕಾಣುತ್ತಿಲ್ಲ, ಇದೊಂದು ದುರುದ್ದೇಶಪೂರಿತ ಆರೋಪವಷ್ಟೆ ಎಂದಿದ್ದಾರೆ.

ಚಿತ್ರೀಕರಣ ಸೆಟ್ ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಕೆಟ್ಟದಾಗಿ ವರ್ತಿಸುತ್ತಾರೆ, ಅತಿಯಾದ ಸ್ನೇಹದ ವರ್ತನೆ ನನಗೆ ಸೆಟ್ ನಲ್ಲಿ ಇರಿಸುಮುರುಸು ಉಂಟುಮಾಡುತ್ತಿದೆ ಎಂದು ನಟಿ ಸಂಜನಾ ಆರೋಪಿಸಿದ್ದರು. ಈ ಆರೋಪದ ಬಗ್ಗೆ ಚಿತ್ರದ ನಿರ್ದೇಶಕ ಮುಕೇಶ್ ಛಬ್ರ ಸುಶಾಂತ್ ಸಿಂಗ್ ರಜಪೂತ್ ಪರ ನಿಂತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com