ನಟಿ ತನುಶ್ರೀ ದತ್ತಾ ಸಲಿಂಗಿ, ಆಕೆ ನನ್ನ ಮೇಲೆ ಹಲವು ಬಾರಿ ರೇಪ್ ಮಾಡಿದ್ದಾರೆ: ರಾಖಿ ಸಾವಂತ್ ಆರೋಪ

ಬಾಲಿವುಡ್ ನಟಿ, ಮಾಡೆಲ್ ರಾಖಿ ಸಾವಂತ್ ವಿರುದ್ಧ ಬಾಲಿವುಡ್ ನಟಿ ತನುಶ್ರೀ ದತ್ತಾ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬೆನ್ನಲ್ಲೇ ಇದೀಗ ರಾಖಿ ಸಾವಂತ್ ತನುಶ್ರೀ ದತ್ತಾ...
ತನುಶ್ರೀ ದತ್ತಾ-ರಾಖಿ ಸಾವಂತ್
ತನುಶ್ರೀ ದತ್ತಾ-ರಾಖಿ ಸಾವಂತ್
ಮುಂಬೈ: ಬಾಲಿವುಡ್ ನಟಿ, ಮಾಡೆಲ್ ರಾಖಿ ಸಾವಂತ್ ವಿರುದ್ಧ ಬಾಲಿವುಡ್ ನಟಿ ತನುಶ್ರೀ ದತ್ತಾ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ಬೆನ್ನಲ್ಲೇ ಇದೀಗ ರಾಖಿ ಸಾವಂತ್ ತನುಶ್ರೀ ದತ್ತಾ ವಿರುದ್ಧ ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದಾರೆ. 
ತನುಶ್ರೀ ದತ್ತಾ ಇತ್ತೀಚೆಗಷ್ಟೇ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ವಿರುದ್ಧ ಮೀಟೂ ಆರೋಪ ಮಾಡಿದ್ದರು. ಇದಕ್ಕೆ ರಾಖಿ ಸಾವಂತ್ ಕಿಡಿಕಾರಿದ್ದು ತನುಶ್ರೀ ದತ್ತಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಇದರಿಂದ ತನುಶ್ರೀ ದತ್ತಾ ರಾಖಿ ವಿರುದ್ಧ 10 ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದರು. 
ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಖಿ ಸಾವಂತ್, 12 ವರ್ಷದ ಹಿಂದೆ ತನುಶ್ರೀ ದತ್ತಾ ನನ್ನ ಒಳ್ಳೆಯ ಸ್ನೇಹಿತೆಯಾಗಿದ್ದಳು. ಆಗ ನನ್ನನ್ನು ರೇವ್ ಪಾರ್ಟಿಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಮತ್ತು ಭರಿಸುವ ಪದಾರ್ಥ ನೀಡಿ ನನ್ನ ಗುಪ್ತಾಂಗಗಳನ್ನು ತನ್ನ ಬೆರಳಿನಿಂದ ಸ್ಪರ್ಧಿಸಿ ರೇಪ್ ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. 
ದೇವರು ಕೈಯನ್ನು ಕೊಟ್ಟಿರುವುದು ತಿನ್ನುವುದಕ್ಕೆ ಆದರೆ ತನುಶ್ರೀ ದತ್ತಾ ಆಕೆಯ ಕೈ ಬೆರಳನ್ನು ನನ್ನ ಗುಪ್ತಾಂಗದ ಒಳಗೆ ಹಾಕಿದ್ದಳು. ಆಕೆ ಸಲಿಂಗಿ ಎಂದು ಆರೋಪಿಸಿದ್ದಾರೆ. 
ಪ್ರಧಾನಿ ಮೋದಿ ಅವರು ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಅಭಿಯಾನವನ್ನು ಕೈಗೊಂಡಿದ್ದಾರೆ. ನಾನು ಅವರನ್ನು ಕೈಮುಗಿದು ವಿನಂತಿಸುತ್ತೇನೆ ಇದೀಗ ದೇಶದಲ್ಲಿನ ಗಂಡಸರನ್ನು ರಕ್ಷಿಸಿ ಎಂದು ಮನವಿ ಮಾಡುತ್ತೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com