ವರ್ಷದ ಸೆಲ್ಫಿ! ಪ್ರಧಾನಿ ಮೋದಿ ಭೇಟಿ ಮಾಡಿದ ಬಾಲಿವುಡ್ ತಾರೆಯರು

ರಣಬೀರ್ ಕಪೂರ್, ರಣವೀರ್ ಸಿಂಗ್ ಹಾಗೂ ವರುಣ್ ಧವನ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಗುರುವಾರ...
ನರೇಂದ್ರ ಮೋದಿ ಜತೆ ಸೆಲ್ಫಿ
ನರೇಂದ್ರ ಮೋದಿ ಜತೆ ಸೆಲ್ಫಿ
Updated on: 
ನವದೆಹಲಿ: ರಣಬೀರ್ ಕಪೂರ್, ರಣವೀರ್ ಸಿಂಗ್ ಹಾಗೂ ವರುಣ್ ಧವನ್ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಗುರುವಾರ​ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಷ್ಟ್ರ ನಿರ್ಮಾಣದಲ್ಲಿ ಚಿತ್ರೋದ್ಯಮದ ಪಾತ್ರದ ಕುರಿತು ಚರ್ಚಿಸಿದ್ದಾರೆ. 
ಖ್ಯಾತ ನಟರಾದ ರಣವೀರ್ ಸಿಂಗ್, ರಣಬೀರ್ ಕಪೂರ್, ಆಲಿಯಾ ಭಟ್, ರಾಜಕುಮಾರ್ ರಾವ್, ಆಯುಷ್ಯಮಾನ್ ಖುರಾನಾ, ವರುಣ್ ಧವನ್, ಸಿದ್ಧಾರ್ಥ ಮಲ್ಹೋತ್ರಾ, ನಿರ್ದೇಶಕರಾದ ರೋಹಿತ್ ಶೆಟ್ಟಿ, ಕರಣ್ ಜೋಹರ್, ನಿರ್ಮಾಪಕರಾದ ಏಕ್ತಾ ಕಪೂರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇಂದು ಮೋದಿ ಅವರನ್ನು ಭೇಟಿ ಮಾಡಿದರು.
ಪ್ರಧಾನಿ ಭೇಟಿ ಬಗ್ಗೆ ತಮ್ಮ ಇನ್​ಸ್ಟಾಗ್ರಾಂನಲ್ಲಿ ಸೆಲ್ಫಿ ಫೋಟೋವೊಂದನ್ನು ಹಾಕಿರುವ ಕರಣ್ ಜೋಹರ್, ಪ್ರಧಾನಿಯವರೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಸರಿಯಾದ ಸಮಯದಲ್ಲಿ ನಡೆಯುವ ಉತ್ತಮ ಸಂವಾದಗಳು ಬದಲಾವಣೆಯನ್ನು ತರಬಲ್ಲವು. ಇಂಥ ಸಂವಾದಗಳು ನಿರಂತರವಾಗಿರಬೇಕು ಅಂತಾ ನಾವು ಆಶಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗುವ ಅವಕಾಶ ಸಿಕ್ಕಿದ್ದು ಮರೆಯಲಾಗದಂತಹ ಘಟನೆ ಎಂದು ಕರಣ್ ಜೋಹರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com