ಬಾಲಿವುಡ್ ನಟನ ಆಟೋಗ್ರಾಫ್‌ಗಾಗಿ ಜಾಕೆಟ್ ಬಿಚ್ಚಿದ ಯುವತಿ!

ತಮ್ಮ ನೆಚ್ಚಿನ ನಟ-ನಟಿಯರ ಆಟೋಗ್ರಾಫ್‌ಗಾಗಿ ಯುವಕ-ಯುವತಿಯರು ಏನೆಲ್ಲಾ ಕಸರತ್ತು ಮಾಡುತ್ತಾರೆ. ಇಲ್ಲೊಬ್ಬ ಯುವತಿ ತಮ್ಮ ನೆಚ್ಚಿನ ನಟನ ಆಟೋಗ್ರಾಫ್‌ಗಾಗಿ ಜಾಕೆಟ್ ಬಿಚ್ಚಿರುವ ಫೋಟೋ ವೈರಲ್ ಆಗಿದೆ.
ಶಾಹಿದ್ ಕಪೂರ್
ಶಾಹಿದ್ ಕಪೂರ್
ತಮ್ಮ ನೆಚ್ಚಿನ ನಟ-ನಟಿಯರ ಆಟೋಗ್ರಾಫ್‌ಗಾಗಿ ಯುವಕ-ಯುವತಿಯರು ಏನೆಲ್ಲಾ ಕಸರತ್ತು ಮಾಡುತ್ತಾರೆ. ಇಲ್ಲೊಬ್ಬ ಯುವತಿ ತಮ್ಮ ನೆಚ್ಚಿನ ನಟನ ಆಟೋಗ್ರಾಫ್‌ಗಾಗಿ ಜಾಕೆಟ್ ಬಿಚ್ಚಿರುವ ಫೋಟೋ ವೈರಲ್ ಆಗಿದೆ. 
ಉತ್ತರ ಖಂಡ್ ನ ಮಸ್ಸೂರಿಯಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಚಿತ್ರವೊಂದರ ಶೂಟಿಂಗ್ ನಲ್ಲಿ ತೊಡಗಿದ್ದಾಗ ಅಲ್ಲಿಗೆ ಬಂದ ಅಭಿಮಾನಿಯೊರ್ವಳು ತಾನು ಧರಿಸಿದ್ದ ಜಾಕೆಟ್ ಬಿಚ್ಚಿ ಶರ್ಟ್ ಮೇಲೆ ಆಟೋಗ್ರಾಫ್ ಹಾಕಿಸಿಕೊಂಡಿದ್ದಾರೆ. ಇದನ್ನು ಕಂಡ ಜನರು ಅಬ್ಬಾ.. ಎಂಥ ಅಭಿಮಾನಿಗಳಿದ್ದಾರೆ ಎಂದು ಆಶ್ಚರ್ಯಪಟ್ಟಿದ್ದಾರೆ. 
ಈ ಹಿಂದೆ ಶಾಹಿದ್ ಸಂದರ್ಶನವೊಂದರಲ್ಲಿ ಒಂದು ಫ್ಯಾನ್ ಮಿಡ್ ನೈಟ್ ರಾಮಾಯಣದ ಬಗ್ಗೆ ಹೇಳಿಕೊಂಡಿದ್ದರು. ರಾತ್ರಿ 2 ಗಂಟೆ ಅಂದು ಶಾಹಿದ್ ವಾಸ ಮಾಡುತ್ತಿದ್ದ ಮನೆಯ ಕಾಂಪೌಂಡ್ ಅನ್ನು ಹತ್ತಿ ಭೇಟಿ ಮಾಡಲು ಬಂದಿದ್ದು ಗಾಬರಿ ಉಂಟು ಮಾಡಿತ್ತು. ಮೊದಲಿಗೆ ಇದನ್ನು ಕಂಡು ಭಯ ಪಡುತ್ತಿದ್ದ ಮೀರಾ ನಂತರ ಅಭಿಮಾನಿಗಳು ಹೇಗೆಂದು ತಿಳಿದುಕೊಂಡು ಸುಮ್ಮನಾದಳು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com