ಅಭಿಮಾನಿಗಳೊಂದಿಗೆ ಫಿಟ್‌ನೆಸ್ ವಿಡಿಯೋ ಹಂಚಿಕೊಂಡ ಶಿಲ್ಪಾ ಶೆಟ್ಟಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಅಭಿಮಾನಿಗಳಿಗಾಗಿ ಫಿಟ್‌ನೆಸ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ನಟಿ
ಬಾಲಿವುಡ್ ನಟಿ ಶಿಲ್ಪಾ ನಟಿ

ನವದೆಹಲಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ಅಭಿಮಾನಿಗಳಿಗಾಗಿ ಫಿಟ್‌ನೆಸ್ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ
ಹಂಚಿಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದು, ಅಭಿಮಾನಿಗಳೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಶಿಲ್ಪಾ ಶೆಟ್ಟಿ ಅವರ ನೃತ್ಯ ಮತ್ತು ಫಿಟ್‌ನೆಸ್‌ಗಾಗಿ ಸುದ್ದಿಯಲ್ಲಿರುತ್ತಾರೆ. ಶಿಲ್ಪಾ ಶೆಟ್ಟಿ ತಮ್ಮ 
ಇನ್ ಸ್ಟಾಗ್ರಾಮ್ ಖಾತೆಯಿಂದ ವಿಡಿಯೋ ಹಂಚಿಕೊಂಡಿದ್ದಾರೆ.

ಈ ವೀಡಿಯೊದಲ್ಲಿ, ಶಿಲ್ಪಾ ಜಿಮ್ ನಲ್ಲಿ ತನ್ನ ವ್ಯಾಯಾಮ ಮಾಡುತ್ತಿರುವುದು ಕಂಡುಬರುತ್ತದೆ.ಶಿಲ್ಪಾ ಅವರ ಈ ವೀಡಿಯೊಗೆ 
ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

"ನಮ್ಮ ಸುತ್ತಲಿನ ಪ್ರಪಂಚವು ನಿಧಾನವಾಗಿ ತೆರೆದುಕೊಳ್ಳುತ್ತಿದೆ ಮತ್ತು ನಾವು ನಮ್ಮ ಜೀವನಕ್ಕೆ ಮರಳಲು ಸಂಪೂರ್ಣವಾಗಿ
 ತಯಾರಿ ನಡೆಸುತ್ತಿದ್ದೇವೆ. ಆದ್ದರಿಂದ, ಇಂದಿನ ವ್ಯಾಯಾಮವು ಬೆನ್ನಿನ ಸ್ನಾಯುಗಳನ್ನು ಬಲಪಡಿಸಲು ಮತ್ತು ದೇಹದ ಮೇಲಿನ
 ಶಕ್ತಿಯನ್ನು ಹೆಚ್ಚಿಸುವ ಉದ್ದೇಶದ್ದಾಗಿದೆ. ಸುರಕ್ಷಿತವಾಗಿರುವುದು ಉತ್ತಮ" ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com