

ಪ್ರತಿಷ್ಠಿತ ಫಿಲ್ಮ್‌ಫೇರ್ ಅವಾರ್ಡ್ಸ್ 2020 ಪ್ರಶಸ್ತಿ ಪ್ರಧಾನ ಸಮಾರಂಭ ಶನಿವಾರ ರಾತ್ರಿ ನಡೆದಿದ್ದು "ಗಲ್ಲಿ ಬಾಯ್" ಚಿತ್ರಕ್ಕೆ ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ರಣವೀರ್ ಸಿಂಗ್, ಆಲಿಯಾ ಭಟ್, ಆಯುಷ್ಮಾನ್ ಖುರಾನಾ ಮತ್ತು ಇತರರ ಉಪಸ್ಥಿತಿಯಲ್ಲಿ ಅಸ್ಸಾಂ ನಲ್ಲಿ ಈ ಕಾರ್ಯಕ್ರಮ ನಡೆದಿದೆ. "ಗಲ್ಲಿ ಬಾಯ್"ಗೆ ಅತ್ಯುತ್ತಮ ಚಿತ್ರ ಪ್ರಶಸ್ತಿ, ಅದೇ ಚಿತ್ರದ ಅಭಿನಯಕ್ಕಾಗಿ ರಣವೀರ್ ಸಿಂಗ್ ಅತ್ಯುತ್ತಮ ನಟ ಪ್ರಶಸ್ತಿ ಗಳಿಸಿದ್ದಾರೆ. ಅಲ್ಲದೆ ಅದೇ ಚಿತ್ರದ ಸಫೀನಾ ಪಾತ್ರಧಾರಿಯಾಗಿದ್ದ ಆಲಿಯಾ ಭತ್ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದ್ದಾರೆ.
ಅನುಭವ್ ಸಿನ್ಹಾ ನಿರ್ದೇಶನದ ಆರ್ಟಿಕಲ್ 15. ಚಿತ್ರಕ್ಕೆ ವಿಮರ್ಶಕರ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ. ಆರ್ಟಿಕಲ್ 15 ರಲ್ಲಿನ ಅಭಿನಯಕ್ಕಾಗಿ ಆಯುಷ್ಮಾನ್ ಖುರಾನಾ ಅತ್ಯುತ್ತಮ ನಟ ವಿಮರ್ಶಕರ ಪ್ರಶಸ್ತಿಯನ್ನು ಗೆದ್ದಿದ್ದಾರೆ
ಫಿಲ್ಮ್ ಫೇರ್ ಪ್ರಶಸ್ತಿ ಪೂರ್ಣ ಪಟ್ಟಿ ಹೀಗಿದೆ-