ತಂದೆ ವಿಲಾಸ್ ರಾವ್ ದೇಶ್ ಮುಖ್ ಜಯಂತಿಗೆ ಭಾವನಾತ್ಮಕವಾಗಿ ವಿಡಿಯೊ ಮಾಡಿದ ಮಗ ರಿತೇಶ್ ದೇಶ್ ಮುಖ್

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರ 75ನೇ ಜಯಂತಿಗೆ ಅವರ ಪುತ್ರ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮಾಡಿರುವ ಭಾವನಾತ್ಮಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾವಪೂರ್ಣ ಮಗ ರಿತೇಶ್
ಭಾವಪೂರ್ಣ ಮಗ ರಿತೇಶ್
Updated on

ಮುಂಬೈ:ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದಿವಂಗತ ವಿಲಾಸ್ ರಾವ್ ದೇಶ್ ಮುಖ್ ಅವರ 75ನೇ ಜಯಂತಿಗೆ ಅವರ ಪುತ್ರ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಮಾಡಿರುವ ಭಾವನಾತ್ಮಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಮ್ಮ ತಂದೆಯ ಕುರ್ತಾದೊಳಗೆ ಕೈಯನ್ನು ಹಾಕಿ ಅಗ್ನಿಪಥ್ ಸಿನೆಮಾದ ಅಭಿ ಮುಜ್ ಮೈ ಕಹಿನ್ ಹಾಡಿನ ಹಿನ್ನೆಲೆಯೊಂದಿಗೆ ತಂದೆ ತನ್ನ ಭುಜದ ಮೇಲೆ ಕೈ ಹಾಕಿ ಸಾಂತ್ವನ ಮಾಡುವ ರೀತಿಯಲ್ಲಿ ತಮ್ಮ ಕೈಯನ್ನೇ ಬಳಸಿ ಸಮಾಧಾನ ಮಾಡುವ ವಿಡಿಯೊ ಮಾಡಿದ್ದಾರೆ. ಕೊನೆಗೆ ಹ್ಯಾಪಿ ಬರ್ತ್ ಡೇ ಪಪ್ಪಾ, ಮಿಸ್ ಯೂ ಎವಿರಿ ವೇರ್ ಎಂದು ಬರೆದುಕೊಂಡಿದ್ದಾರೆ.

 
 
 
 
 
 
 
 
 
 
 
 
 

Happy Birthday PAPPA..... Miss you everyday!! #vilasraodeshmukh75

A post shared by Riteish Deshmukh (@riteishd) on

ಈ ವಿಡಿಯೊ ಅತ್ಯಂತ ಭಾವುಕವಾಗಿದ್ದು ಇದನ್ನು ರಿತೇಶ್ ಇನ್ಸ್ಟಾಗ್ರಾಮ್ ನಲ್ಲಿ ಹಾಕಿದ ಕೆಲವೇ ಹೊತ್ತಿನಲ್ಲಿ ವೈರಲ್ ಆಗಿದೆ. ಅವರ ಪತ್ನಿ ನಟಿ ಜೆನಿಲಿಯಾ ಡಿಸೋಜ ಕೂಡ ಅಗಲಿದ ಮಾವನಿಗೆ ಗೌರವ ಸೂಚಕವಾಗಿ ಬರೆದಿದ್ದಾರೆ.

ಎರಡು ಬಾರಿ ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ವಿಲಾಸ್ ರಾವ್ ದೇಶ್ ಮುಖ್ 2012ರಲ್ಲಿ ಅಗಲಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com