ಸುಶಾಂತ್ ಸಿಂಗ್ ರಜಪೂತ್ ಜೀವನದಿಂದ ಸ್ಫೂರ್ತಿ ಪಡೆದ 'ನ್ಯಾಯ್: ದಿ ಜಸ್ಟೀಸ್' ಸಿನಿಮಾ ಟ್ರೇಲರ್ ಬಿಡುಗಡೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷವಾಗಲು ಇನ್ನು ಕೆಲವೇ ದಿನಗಳಿದೆ. ಆದರೆ  ಒಂದು ವರ್ಷದ ನಂತರವೂ ಅಭಿಮಾನಿಗಳು ಮತ್ತು ಕುಟುಂಬ ಅವರ ಸಾವಿನ ದುರಂತವನ್ನು ಇನ್ನೂ ಮರೆತಿಲ್ಲ. ಆದರೆ ಸುಶಾಂತ್ ನಿಜ ಜೀವನದ ಕಥೆಯಿಂದ ಪ್ರೇರಿತವಾದ ಚಿತ್ರವೊಂದು ತಯಾರಾಗಿದ್ದು ಇದೀಗ ಟ್ರೇಲರ್  ಬಿಡುಗಡೆಯಾಗಿದೆ.
ನ್ಯಾಯ್: ದಿ ಜಸ್ಟೀಸ್ ಟ್ರೇಲರ್
ನ್ಯಾಯ್: ದಿ ಜಸ್ಟೀಸ್ ಟ್ರೇಲರ್
Updated on: 

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಒಂದು ವರ್ಷವಾಗಲು ಇನ್ನು ಕೆಲವೇ ದಿನಗಳಿದೆ. ಆದರೆ ಒಂದು ವರ್ಷದ ನಂತರವೂ ಅಭಿಮಾನಿಗಳು ಮತ್ತು ಕುಟುಂಬ ಅವರ ಸಾವಿನ ದುರಂತವನ್ನು ಇನ್ನೂ ಮರೆತಿಲ್ಲ. ಆದರೆ ಸುಶಾಂತ್ ನಿಜ ಜೀವನದ ಕಥೆಯಿಂದ ಪ್ರೇರಿತವಾದ ಚಿತ್ರವೊಂದು ತಯಾರಾಗಿದ್ದು ಇದೀಗ ಟ್ರೇಲರ್  ಬಿಡುಗಡೆಯಾಗಿದೆ.

ವಿಶೇಷವೆಂದರೆ ಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಕೆಕೆ ಸಿಂಗ್ ಅವರು ಅರ್ಜಿ ಸಲ್ಲಿಸಿದ್ದರೂ, ಹೈಕೋರ್ಟ್ ಅವರ ಮನವಿಯನ್ನು ವಜಾಗೊಳಿಸಿದೆ. ಇದೀಗ "ನ್ಯಾಯ್: ದಿ ಜಸ್ಟೀಸ್" ಚಿತ್ರದ ಟ್ರೇಲರ್ ಹೊರಬಿದ್ದಿದೆ.

ಚಿತ್ರವು ಸುಶಾಂತ್ ಅವರ ಜೀವನದ ಆಧಾರಿತವಾಗಿದೆ ಎಂದು ನೀವೀಗಾಗಲೇ ತಿಳಿದಿದ್ದೀರಿ. ಚಿತ್ರದಲ್ಲಿ ಸುಶಾಂತ್, ರಿಯಾ ಚಕ್ರವರ್ತಿ ಸೇರಿ ಎಲ್ಲಾ ಪಾತ್ರಗಳಿದ್ದು ಎಲ್ಲರ ಹೆಸರನ್ನು ಬದಲಿಸಲಾಗಿದೆ.

ಜುಬೇರ್​ ಕೆ. ಖಾನ್​, ಶ್ರೇಯಾ ಶುಕ್ಲಾ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com