ನನಗೇನು ಆಗಿಲ್ಲ, ನಾನು ಚೆನ್ನಾಗಿದ್ದೇನೆ: ಆರೋಗ್ಯ ವದಂತಿ ಬಗ್ಗೆ 'ಶಕ್ತಿಮಾನ್' ಮುಕೇಶ್ ಖನ್ನಾ ಸ್ಪಷ್ಟನೆ

ತಮ್ಮ ಆರೋಗ್ಯದ ಬಗ್ಗೆ ಹರಡಿರುವ ವದಂತಿಗಳ ಬಗ್ಗೆ ನಟ ಮುಕೇಶ್ ಖನ್ನ ಸ್ಪಷ್ಟನೆ ನೀಡಿದ್ದಾರೆ. ತಾವು ಆರೋಗ್ಯವಾಗಿ ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ
ಮುಕೇಶ್ ಖನ್ನಾ
ಮುಕೇಶ್ ಖನ್ನಾ
Updated on

ನವದೆಹಲಿ: ತಮ್ಮ ಆರೋಗ್ಯದ ಬಗ್ಗೆ ಹರಡಿರುವ ವದಂತಿಗಳ ಬಗ್ಗೆ ನಟ ಮುಕೇಶ್ ಖನ್ನ ಸ್ಪಷ್ಟನೆ ನೀಡಿದ್ದಾರೆ. ತಾವು ಆರೋಗ್ಯವಾಗಿ ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ. 62 ವರ್ಷದ ಮುಕೇಶ್ ಖನ್ನಾ ಅವರು ಕೊರೋನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

ಈ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿರುವ 'ಶಕ್ತಿಮಾನ್' ನಟ ನಾನು ಆರೋಗ್ಯದಿಂದೇನೆ, ನನಗೆ ಕೊರೋನಾ ಸೋಂಕು ತಗುಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸುಳ್ಳು ಸುದ್ದಿಯನ್ನು ಯಾರು ಹರಡಿದರು ಎಂಬುದು ಗೊತ್ತಿಲ್ಲ, ಇದರ ಹಿಂದಿನ ಉದ್ದೇಶವು ನನಗೆ ತಿಳಿದಿಲ್ಲ.  ಇಂತಹ ಮನಸ್ಥಿತಿ ಇರುವವರಿಗೆ ಯಾವ ಚಿಕಿತ್ಸೆ ಕೊಡಿಸಬೇಕು, ನಿಮ್ಮ ಆಶೀರ್ವಾದದಿಂದ ನಾನು ಆರೋಗ್ಯವಾಗಿದ್ದೇನೆ ಎಂದು ಹೇಳಿದ್ದಾರೆ.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಶಕ್ತಿಮಾನ್, ಹಾಗೂ ಮಹಾಭಾರತದಲ್ಲಿ ಭೀಷ್ಮ ಪಿತಾಮಹ ಪಾತ್ರ ನಿರ್ವಹಿಸಿ ಪ್ರಸಿದ್ಧರಾಗಿದ್ದರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com