ಬಾಲಿವುಡ್ ನಟಿ ಸೋನಾಕ್ಷಿ, ಜಹೀರ್ ಇಕ್ಬಾಲ್ ಸರಳ ವಿವಾಹ; ದಾಂಪತ್ಯ ಜೀವನಕ್ಕೆ ಪ್ರವೇಶ!

ಬಾಂದ್ರಾ ವೆಸ್ಟ್ ಅಪಾರ್ಟ್‌ಮೆಂಟ್‌ ನ 'ಹೀರಾಮಂಡಿಯಲ್ಲಿ' 37 ವರ್ಷದ ಸೋನಾಕ್ಷಿ, 35 ವರ್ಷದ ಜಹೀರ್ ಹೊಸ ಜೀವನಕ್ಕೆ ಅಡಿಯಿಟ್ಟರು. ಈ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರಿಬ್ಬರೂ ಮಾಹಿತಿ ಹಂಚಿಕೊಂಡಿದ್ದಾರೆ.
ಸೋನಾಕ್ಷಿ, ಜಹೀರ್ ಇಕ್ಬಾಲ್
ಸೋನಾಕ್ಷಿ, ಜಹೀರ್ ಇಕ್ಬಾಲ್
Updated on

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಜಹೀರ್ ಇಕ್ಬಾಲ್ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು ಎಂದು ಮದುವೆ ನಂತರ ನೂತನ ದಂಪತಿ ತಿಳಿಸಿದ್ದಾರೆ. ಈ ವಿವಾಹ ಸಮಾರಂಭದಲ್ಲಿ ಯಾವುದೇ ಧರ್ಮದ ಶಾಸ್ತ್ರಗಳ ಆಚರಣೆ ಮಾಡುವ ಬದಲು ರಿಜಿಸ್ಟರ್ ಮದುವೆಯಾಗಿದ್ದಾರೆ.

ಸೋನಾಕ್ಷಿ, ಜಹೀರ್ ಇಕ್ಬಾಲ್
ಮುಸ್ಲಿಂ ಯುವಕನ ಜತೆ ಸೋನಾಕ್ಷಿ ಸಿನ್ಹಾ ವಿವಾಹ: ಆಮಂತ್ರಿಸಿದರೆ ಹೋಗಿ ಆಶೀರ್ವಾದ ಮಾಡಿ ಬರುತ್ತೇನೆ; ಶತ್ರುಘ್ನ ಸಿನ್ಹಾ

ಬಾಂದ್ರಾ ವೆಸ್ಟ್ ಅಪಾರ್ಟ್‌ಮೆಂಟ್‌ ನ 'ಹೀರಾಮಂಡಿಯಲ್ಲಿ' 37 ವರ್ಷದ ಸೋನಾಕ್ಷಿ, 35 ವರ್ಷದ ಜಹೀರ್ ಹೊಸ ಜೀವನಕ್ಕೆ ಅಡಿಯಿಟ್ಟರು. ಈ ಕುರಿತು ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಅವರಿಬ್ಬರೂ ಮಾಹಿತಿ ಹಂಚಿಕೊಂಡಿದ್ದಾರೆ.

ಏಳು ವರ್ಷದ ಹಿಂದೆ ಇದೇ ದಿನ ಪರಿಶುದ್ಧ ಪ್ರೀತಿ ನಮ್ಮಿಬ್ಬರ ಕಣ್ಣಲ್ಲಿ ಕಂಡಿತ್ತು ಮತ್ತು ಆ ಪ್ರೀತಿ ಹಾಗೆ ಇರಬೇಕೆಂದು ಅಂದೇ ನಿರ್ಧರಿಸಿದೆವು. ಎಲ್ಲಾ ಸವಾಲುಗಳು ಮತ್ತು ಗೆಲುವಿಗೂ ಆ ಪ್ರೀತಿ ಮಾರ್ಗದರ್ಶನ ಮಾಡಿತು. ಅದು ಈ ಕ್ಷಣಕ್ಕೆ ಕಾರಣವಾಯಿತು. ನಮ್ಮ ಎರಡೂ ಕುಟುಂಬಗಳು ಮತ್ತು ಎರಡೂ ದೇವರುಗಳ ಆಶೀರ್ವಾದದೊಂದಿಗೆ ನಾವೀಗ ದಂಪತಿಗಳಾಗಿದ್ದೇವೆ. ಇಲ್ಲಿಂದ ಪ್ರೀತಿ, ಭರವಸೆ ಎಲ್ಲವೂ ಪರಸ್ಪರ ಸುಂದರವಾಗಿರುತ್ತದೆ. ಶಾಶ್ವತವಾಗಿರುತ್ತದೆ ಎಂದು ಮದುವೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.

ಸೋನಾಕ್ಷಿ, ಜಹೀರ್ ಇಕ್ಬಾಲ್
ಇದೊಳ್ಳೆ 'ರಾಮಾಯಣ', ಹನುಮಂತ ಸಂಜೀವಿನಿ ಯಾರಿಗೆ ತಂದದ್ದು ಗೊತ್ತಿಲ್ಲ; ಸೋನಾಕ್ಷಿ ಸಿನ್ಹಾ ವಿರುದ್ಧ ಟೀಕೆ!

ಈ ಫೋಟೋಗೆ ಅಭಿಮಾನಿಗಳು ಲೈಕ್ ಒತ್ತುತ್ತಿದ್ದಾರೆ. ವಿವಾಹ ಮಹೋತ್ಸವದಲ್ಲಿ ಸೋನಾಕ್ಷಿ ಸಿನ್ಹಾ ಸೀರೆಯನ್ನು ಧರಿಸಿದ್ದರೆ, ಜಹೀರ್ ಕುರ್ತಾ-ಪೈಜಾಮಾದಲ್ಲಿ ಮಿಂಚಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com