ದಿವಂಗತ ಆಶಾ ಭೋಸ್ಲೆ ಸ್ಮರಿಸಿದ WWE ತಾರೆ John Cena

ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಖ್ಯಾತ ಬಾಲಿವುಡ್ ನಟ, WWE ಮಾಜಿ ರೆಸ್ಲರ್ ಜಾನ್ ಸೀನಾ ಕಂಬನಿ ಮಿಡಿದಿದ್ದಾರೆ.
WWE star John Cena remembers late Asha Bhosle
ಜಾನ್ ಸೀನಾ ಮತ್ತು ಆಶಾ ಭೋಸ್ಲೆ
Updated on

ನವದೆಹಲಿ: ಖ್ಯಾತ ಬಾಲಿವುಡ್ ನಟ, WWE ಮಾಜಿ ರೆಸ್ಲರ್ ಜಾನ್ ಸೀನಾ ಭಾರತದ ಸಂಗೀತ ದಂತಕಥೆ ಗಾಯಕಿ ಆಶಾ ಭೋಸ್ಲೆ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಖ್ಯಾತ ಬಾಲಿವುಡ್ ನಟ, WWE ಮಾಜಿ ರೆಸ್ಲರ್ ಜಾನ್ ಸೀನಾ ಕಂಬನಿ ಮಿಡಿದಿದ್ದಾರೆ.

ಜಾನ್ ಸೀನಾ ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ದಿವಂಗತ ಗಾಯಕಿಯ ಚಿತ್ರವನ್ನು ಹಂಚಿಕೊಂಡು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಆಶಾ ಭೋಸ್ಲೆ ವೇದಿಕೆಯಲ್ಲಿ ಪ್ರದರ್ಶನ ನೀಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಈ ಪೋಸ್ಟ್ ಗೆ ಅವರ ಸಹನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಕೂಡ ರಿಟ್ವೀಟ್ ಮಾಡಿದ್ದು, ಪೋಸ್ಟ್ ಅಡಿಯಲ್ಲಿ ಕ್ವೀನ್ ಎಂದು ಕಾಮೆಂಟ್ ಮಾಡಿದ್ದಾರೆ.

WWE star John Cena remembers late Asha Bhosle
ಆಶಾ ಭೋಸ್ಲೆ ಅಂತಿಮ ದರ್ಶನ ಪಡೆದು, ಕಣ್ಣೀರ ವಿದಾಯ ಹೇಳಿದ ಸಚಿನ್, ಮೊಹಮ್ಮದ್ ಸಿರಾಜ್! Video

ಆಶಾ ಭೋಸ್ಲೆ ಅವರು ಭಾನುವಾರ ತಮ್ಮ 92 ನೇ ವಯಸ್ಸಿನಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. ಸೋಮವಾರ ಮುಂಬೈನಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು ಮತ್ತು ದಿವಂಗತ ಗಾಯಕಿಗೆ ಗೌರವ ಸಲ್ಲಿಸಲು ವಿವಿಧ ಉದ್ಯಮಗಳ ಗಣ್ಯರು ಆಗಮಿಸಿದ್ದರು.

ಭಾರತೀಯ ಹಿನ್ನೆಲೆ ಗಾಯನದಲ್ಲಿ ಶ್ರೇಷ್ಠ ಹೆಸರುಗಳಲ್ಲಿ ಒಬ್ಬರಾದ ಭೋಸ್ಲೆ ಎಂಟು ದಶಕಗಳ ಕಾಲ ತಮ್ಮ ವೃತ್ತಿಜೀವನದಲ್ಲಿ 20 ಭಾಷೆಗಳಲ್ಲಿ 12,000 ಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ದಾಖಲೆ ಸೃಷ್ಟಿಸಿದ್ದಾರೆ. ಅವರಿಗೆ 2000 ದಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು 2008 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com