Cheque Bounce Case ನಿಂದ ಜೈಲು ಸೇರಿದ ಖ್ಯಾತ ಹಾಸ್ಯನಟ; ರಾಜ್ ಪಾಲ್ ಯಾದವ್ ಆಸ್ತಿ ಎಷ್ಟು?

Rajpal Yadav: ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್, ರಾಜ್ ಪಾಲ್ ಯಾದವ್ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆಯನ್ನು ದೆಹಲಿ ನ್ಯಾಯಾಲಯ ಆದೇಶಿಸಿದೆ. ಹಾಗಾದ್ರೆ, ರಾಜ್ ಪಾಲ್ ತಗೆದೆಕೊಂಡ ಸಾಲ ಎಷ್ಟು? ಹಾಗು ಅವರ ಒಟ್ಟು ಆಸ್ತಿ ಎಷ್ಟು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:
Rajpal Yadav
ರಾಜ್ ಪಾಲ್ ಆಸ್ತಿ ಎಷ್ಟು?Online Desk
Updated on

ನವದೆಹಲಿ: ಬಾಲಿವುಡ್ ಖ್ಯಾತ ಹಾಸ್ಯನಟ ರಾಜ್ ಪಾಲ್ ಯಾದವ್ (Rajpal Yadav) ಅವರು ಚೆಕ್ ಬೌನ್ಸ್ ಪ್ರಕರಣಕ್ಕೆ (Cheque Bounce Case) ಸಂಬಂಧಿಸಿದಂತೆ ಪುನಃ ಜೈಲು ಪಾಲಾಗಿದ್ದಾರೆ. ಹೌದು, ಚಲನಚಿತ್ರವೊಂದಕ್ಕೆ ತೆಗೆದುಕೊಂಡ ಸಾಲಕ್ಕೆ ಸಂಬಂಧಿಸಿದ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ (Delhi High Court), ರಾಜ್ ಪಾಲ್ ಯಾದವ್ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆಯನ್ನು ದೆಹಲಿ ನ್ಯಾಯಾಲಯ ಆದೇಶಿಸಿದೆ. ಹಾಗಾದ್ರೆ, ರಾಜ್ ಪಾಲ್ ತಗೆದೆಕೊಂಡ ಸಾಲ ಎಷ್ಟು? ಹಾಗು ಅವರ ಒಟ್ಟು ಆಸ್ತಿ ಎಷ್ಟು ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:

ಏನಿದು ಪ್ರಕರಣ?

ರಾಜ್ ಪಾಲ್ ಯಾದವ್ ಅವರು 2012ರಲ್ಲಿ ಬಿಡುಗಡೆಯಾದ ಆಟ ಪಟಾ ಲಪಟಾ ಚಿತ್ರದ ನಿರ್ಮಾಣಕ್ಕಾಗಿ ಸುಮಾರು 9 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆ ಸಾಲ ಮರುಪಾವತಿಗೆ ನೀಡಿದ ಚೆಕ್ ಬೌನ್ಸ್ ಆಗಿದ್ದರಿಂದ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಕೋರ್ಟ್ ಹಲವು ಬಾರಿ ಸಾಲ ಮರುಪಾವತಿ ಮಾಡಲು ಅವರಿಗೆ ಅವಕಾಶ ನೀಡಿತ್ತು. ಆದರೆ ಸಾಲ ಮರುಪಾವತಿಯಾಗದ ಕಾರಣ ಈಗ ದೆಹಲಿ ಹೈಕೋರ್ಟ್ ಅವರನ್ನು ಮತ್ತೆ ಜೈಲಿಗೆ ಕಳುಹಿಸಲು ಆದೇಶ ನೀಡಿದೆ.

ಒಂದು ಚಿತ್ರದ ಸಂಭಾವನೆ ಎಷ್ಟು?

ಭೂಲ್ ಭೂಲೈಯ್ಯಾ, ಹಂಗಾಮಾ, ಚುಪ್ ಚುಪ್ ಕೆ ನಂತಹ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ, 54 ವರ್ಷದ ರಾಜ್ ಪಾಲ್ ಯಾದವ್ ಅವರು ಬಾಲಿವುಡ್ ನ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟರಲ್ಲಿ ಒಬ್ಬರು. ವರದಿಗಳ ಪ್ರಕಾರ ಅವರು ಒಂದು ಚಿತ್ರಕ್ಕೆ 1 ರಿಂದ 2 ಕೋಟಿ ರೂಪಾಯಿ ವರೆಗೆ ಫೀಸ್ ಪಡೆಯುತ್ತಾರೆ ಎನ್ನಲಾಗಿದೆ. ಇನ್ನು ಚಲನಚಿತ್ರಗಳ ಹೊರತಾಗಿ ರಾಜ್ ಪಾಲ್ ಅವರು ಬ್ರಾಂಡ್ ಪ್ರಚಾರಗಳು, ಸ್ಟೇಜ್ ಶೋ ಮತ್ತು ಹೂಡಿಕೆಗಳಿಂದ ಸುಮಾರು 30 ರಿಂದ 35 ಲಕ್ಷ ರೂಪಾಯಿ ವಾರ್ಷಿಕ ಸಂಭಾವನೆ ಪಡೆಯುತ್ತಾರೆ.

Rajpal Yadav
ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್ ನಟ Rajpal Yadav ಮತ್ತೆ ಜೈಲುಪಾಲು: ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್

ಹಾಗಾದ್ರೆ, ಹಂಗಾಮಾ ನಟನ ಒಟ್ಟು ಆಸ್ತಿ ಎಷ್ಟು?

ರಾಜ್‌ಪಾಲ್ ಯಾದವ್ ಅವರ ನಿವ್ವಳ ಮೌಲ್ಯವು ಸುಮಾರು 50 ರಿಂದ 85 ಕೋಟಿ ರೂಪಾಯಿಗಳು ಎಂದು ಅಂದಾಜಿಸಲಾಗಿದೆ.ಇದರೊಂದಿಗೆ ಅವರ ಬಳಿ Audi ಮತ್ತು BMW ನಂತಹ ಐಷಾರಾಮಿ ಕಾರುಗಳಿವೆ. ಜೊತೆಗೆ ರಾಜ್‌ಪಾಲ್ ಯಾದವ್ ತಮ್ಮ ಸ್ವಗ್ರಾಮವಾದ ಮಧ್ಯಪ್ರದೇಶದ ರತಿಖೇಡ ಗ್ರಾಮದಲ್ಲಿ 5,000 ಚದರ ಅಡಿ ವಿಸ್ತೀರ್ಣದ ಮನೆಯ ಮಾಲೀಕರಾಗಿದ್ದಾರೆ. ಇದರ ಮೌಲ್ಯ 30 ಲಕ್ಷ ರೂಪಾಯಿ ಎಂದು ಹೇಳಲಾಗುತ್ತದೆ. ಹೆಚ್ಚುವರಿಯಾಗಿ, ಅವರ ಹೆಸರಿನಲ್ಲಿ 2.2 ಹೆಕ್ಟೇರ್ ಕೃಷಿ ಭೂಮಿಯೂ ಇದೆ, ಇದರ ಮೌಲ್ಯ ಸುಮಾರು 40 ಲಕ್ಷ ರೂಪಾಯಿ ಎನ್ನಲಾಗಿದೆ. ಇಷ್ಟೊಂದು ಕೋಟ್ಯಂತರ ಆಸ್ತಿ ಇದ್ದಾಗ್ಯೂ, ರಾಜ್‌ಪಾಲ್ ಯಾದವ್ ಅವರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com