ಚೆಕ್ ಬೌನ್ಸ್ ಪ್ರಕರಣ: ಬಾಲಿವುಡ್ ನಟ Rajpal Yadav ಮತ್ತೆ ಜೈಲುಪಾಲು: ಶಿಕ್ಷೆ ಎತ್ತಿಹಿಡಿದ ದೆಹಲಿ ಹೈಕೋರ್ಟ್

ವಿಚಾರಣೆಯ ವೇಳೆ ಅವರ ನಡೆ-ನುಡಿಯನ್ನು ಪರಿಗಣಿಸಿದ ನ್ಯಾಯಾಲಯವು ಅವರಿಗೆ ಪ್ರೊಬೇಷನ್ (ಪರಿವೀಕ್ಷಣೆಯಡಿ ಬಿಡುಗಡೆ) ಸೌಲಭ್ಯ ನೀಡಲು ನಿರಾಕರಿಸಿದೆ.
Actor Rajpal Yadav to go to jail
ಹಾಸ್ಯನಟ ರಾಜ್ ಪಾಲ್ ಯಾದವ್
Updated on

ನವದೆಹಲಿ: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಬಾಲಿವುಡ್ ಹಾಸ್ಯ ನಟ ರಾಜ್‌ಪಾಲ್ ಯಾದವ್‌ಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಆ ಮೂಲಕ ರಾಜ್ ಪಾಲ್ ಯಾದವ್ ಮತ್ತೆ ಜೈಲುಪಾಲಾಗಿದ್ದಾರೆ.

ವಿಚಾರಣೆಯ ವೇಳೆ ಅವರ ನಡೆ-ನುಡಿಯನ್ನು ಪರಿಗಣಿಸಿದ ನ್ಯಾಯಾಲಯವು ಅವರಿಗೆ ಪ್ರೊಬೇಷನ್ (ಪರಿವೀಕ್ಷಣೆಯಡಿ ಬಿಡುಗಡೆ) ಸೌಲಭ್ಯ ನೀಡಲು ನಿರಾಕರಿಸಿದೆ.

ನ್ಯಾಯಮೂರ್ತಿ ಸ್ವರ್ಣ ಕಾಂತ ಶರ್ಮಾ ಅವರು ರಾಜ್‌ಪಾಲ್ ಯಾದವ್ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಿ, ನೆಗೋಶಿಯಬಲ್ ಇನ್‌ಸ್ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಯಥಾಸ್ಥಿತಿಯಲ್ಲಿ ಎತ್ತಿಹಿಡಿದರು.

ನ್ಯಾಯಾಲಯದ ಮುಂದೆ ಈಗಾಗಲೇ ಠೇವಣಿ ಇಡಲಾಗಿದ್ದ 2.25 ಕೋಟಿ ಮೊತ್ತವನ್ನು ದೂರುದಾರರಿಗೆ ಬಿಡುಗಡೆ ಮಾಡಲಾಗಿದ್ದು, ರಾಜ್‌ಪಾಲ್ ಯಾದವ್ ಪಾವತಿಸಬೇಕಾದ ಒಟ್ಟು ಬಾಧ್ಯತೆಯನ್ನು ಲೆಕ್ಕ ಹಾಕುವ ವೇಳೆ ಈ ಮೊತ್ತವನ್ನು ಹೊಂದಾಣಿಕೆ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.

Actor Rajpal Yadav to go to jail
ಮುಂಬೈ ಮುಂಗಾರು ಅಬ್ಬರ: ಜಲಾವೃತ ರೈಲು ಹಳಿಗಳಲ್ಲಿ ಮೀನುಗಳ ಸ್ವಚ್ಛಂದ ಈಜಾಟ, Video Viral

3 ತಿಂಗಳ ಜೈಲು

ಇದಲ್ಲದೆ, ಚೆಕ್ ಬೌನ್ಸ್‌ಗೆ ಸಂಬಂಧಿಸಿದ ಏಳು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ. ಆದರೆ, ಎಲ್ಲಾ ಶಿಕ್ಷೆಗಳು ಏಕಕಾಲದಲ್ಲಿ (Concurrent) ಜಾರಿಯಾಗಲಿದ್ದು, ಒಟ್ಟು ಮೂರು ತಿಂಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ವಿಚಾರಣಾ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತವನ್ನೂ ರಾಜ್‌ಪಾಲ್ ಯಾದವ್ ಪಾವತಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಆರು ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಎಚ್ಚರಿಸಿದೆ.

ತೀರ್ಪನ್ನು ಪಾಲಿಸಲು ಅಥವಾ ಮೇಲ್ಮನವಿ ಸೇರಿದಂತೆ ಸೂಕ್ತ ಕಾನೂನು ಪರಿಹಾರ ಪಡೆಯಲು ರಾಜ್‌ಪಾಲ್ ಯಾದವ್‌ಗೆ ಎರಡು ತಿಂಗಳ ಕಾಲಾವಕಾಶವನ್ನು ಹೈಕೋರ್ಟ್ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com