

ಇತ್ತೀಚೆಗಷ್ಟೇ ಬಿಡುಗಡೆಯಾದ ಚಿತ್ರ 'ಚಾಂದ್ ಮೇರಾ ದಿಲ್'ಕ್ಕಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಅವರ 'fusion' ಭರತನಾಟ್ಯ ಇದೀಗ ಟ್ರೋಲ್‌ಗೆ ಗುರಿಯಾಗಿದೆ. ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಇದೀಗ ನಟಿಯನ್ನು ಟೀಕಿಸಿದ್ದು, ನಟಿಗಾಗಿ ಇದೀಗ ಹೊಸದಾಗಿ ಶಾಸ್ತ್ರೀಯ ನೃತ್ಯವನ್ನು 'ತಯಾರಿಸಲು' ಸಾಧ್ಯವಿಲ್ಲ. ಏಕೆಂದರೆ ಅದು ಹಲವು ವರ್ಷಗಳಿಂದಲೇ ಅಸ್ಥಿತ್ವದಲ್ಲಿದೆ ಎಂದು ಹೇಳಿದರು.
'ಅನನ್ಯಾ ಪಾಂಡೆ ನನ್ನ ನೆಚ್ಚಿನ ನೃತ್ಯ ಪ್ರಕಾರವಾದ ಭರತನಾಟ್ಯವನ್ನು ಕೊಂದಿದ್ದಾರೆ! ನಾನು ಏಳನೇ ವಯಸ್ಸಿನಿಂದ ಹದಿಮೂರನೇ ವಯಸ್ಸಿನವರೆಗೆ ಅದನ್ನು ಕಲಿತಿದ್ದೇನೆ. ಕುವೈತ್‌ನಲ್ಲಿ ನಾನು ರಂಗ ಪ್ರವೇಶ ಮಾಡಿದೆ ಮತ್ತು ಅಲ್ಲಿಂದ ಎಂದಿಗೂ ಹಿಂತಿರುಗಿ ನೋಡಲಿಲ್ಲ' ಎಂದಿದ್ದಾರೆ.
'ಶಾಸ್ತ್ರೀಯ ನೃತ್ಯವನ್ನು ಮಾಡಲು ಸ್ವಲ್ಪ ಸಮಯದವರೆಗೆ ಅಧ್ಯಯನ ಮಾಡಬೇಕಾಗಿದೆ ಮತ್ತು ಅನನ್ಯಾ ಪಾಂಡೆಗಾಗಿ ಅದನ್ನು ತಯಾರಿಸಲು ಸಾಧ್ಯವಿಲ್ಲ! ದಯವಿಟ್ಟು ಭರತನಾಟ್ಯದಂತಹ ಸುಂದರ ಕಲೆಯನ್ನು ಎಂದಿಗೂ ಅವಮಾನಿಸಬೇಡಿ' ಎಂದು ಶಮಾ ಮೊಹಮ್ಮದ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ವೈರಲ್ ಆದ ಸಿನಿಮಾದ ಕ್ಲಿಪ್‌ನಲ್ಲಿ ಅನನ್ಯಾ ಅವರ ಭರತನಾಟ್ಯಂ ಅನ್ನು ಸಾಮಾಜಿಕ ಮಾಧ್ಯಮದ ಒಂದು ವರ್ಗವು ಟೀಕಿಸಿದರೆ, ಕೆಲವರು ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅದರ ಜವಾಬ್ದಾರಿ ಸಂಪೂರ್ಣವಾಗಿ ನಟಿಯ ಮೇಲಿರುವುದಿಲ್ಲ ಎಂದು ಹೇಳಿದರು.
ವೈರಲ್ ಕ್ಲಿಪ್‌ನಲ್ಲಿ ಅನನ್ಯಾ ಪಾಂಡೆ ಅವರ ನೃತ್ಯವನ್ನು ಸಮರ್ಥಿಸಿಕೊಂಡ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.
'ನಾವು ನೃತ್ಯ ಸಂಯೋಜಕರ ಮೇಲೆ ಗಮನ ಕೇಂದ್ರೀಕರಿಸಬಹುದೇ? ಅದನ್ನು ನೃತ್ಯ ಮಾಡಿದ ನಟಿಗೆ ನಾವು ಏಕೆ ದಂಡ ವಿಧಿಸಬೇಕು?' ಎಂದು ಒಬ್ಬರು ಬರೆದಿದ್ದಾರೆ.
ಮತ್ತೊಬ್ಬರು, 'ಹಾಗಾದರೆ, ಅನನ್ಯಾ ಪಾಂಡೆ (ನಟಿ) ವೈದ್ಯೆಯ ಪಾತ್ರವನ್ನು ಮಾಡಿದರೆ, ಅವರು ವೈದ್ಯಕೀಯ ಕಾಲೇಜಿಗೆ ಸೇರಿ ಏಳು ವರ್ಷಗಳ ಕೋರ್ಸ್ ಪೂರ್ಣಗೊಳಿಸಿ ಚಿತ್ರದಲ್ಲಿ ನಟಿಸಬೇಕು ಎಂದು ನೀವು ನಿರೀಕ್ಷಿಸುತ್ತೀರಾ?!' ಎಂದಿದ್ದಾರೆ.
'ನಟರು ನಿರ್ದೇಶಕರು ಹೇಳಿದಂತೆ ವರ್ತಿಸುತ್ತಾರೆ ಹೊರತು, ಪ್ರತಿಯಾಗಿ ಅಲ್ಲ...' ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.
ಶಮಾ ಅವರ ಕಮೆಂಟ್‌ಗಾಗಿ ಅವರನ್ನೂ ಟ್ರೋಲ್ ಮಾಡಲಾಯಿತು. ಒಬ್ಬ ಬಳಕೆದಾರರು, 'ಕೇವಲ ನಾಲ್ಕು ನಿಮಿಷದ ಕೆಟ್ಟ ಪ್ರದರ್ಶನವೊಂದು ನಿಮ್ಮಿಷ್ಟದ ವಿಚಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದಾದರೂ ಅದೆಂಬುದು ನಿಮಗೆ ಇಷ್ಟವಾಗಿರಲಿಲ್ಲ' ಎಂದು ಬರೆದಿದ್ದಾರೆ.
ನೃತ್ಯ ಸಂಯೋಜಕರ ಸ್ಪಷ್ಟನೆ
ಅನನ್ಯಾ ಅವರ ಭರತನಾಟ್ಯದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಹಾಯಕ ನೃತ್ಯ ಸಂಯೋಜಕಿ ಅನನ್ಯಾ ಆರ್. ಕುರುಪ್ ನಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಅವರು BTS ದೃಶ್ಯಗಳ ಒಂದು ಸಣ್ಣ ತುಣುಕು, ಅನನ್ಯಾ ಜೊತೆಗಿನ ಚಿತ್ರ ಮತ್ತು ಪರದೆ ಮೇಲೆ ಅವರ ಹೆಸರನ್ನು ತೋರಿಸುವ ಎಂಡ್ ಕ್ರೆಡಿಟ್ಸ್ ಅನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯಲ್ಲಿ, ಅನನ್ಯಾ ಪಾಂಡೆ ನೀವು ನಿಜವಾಗಿಯೂ ನನಗೆ ತಿಳಿದಿರುವ ಅತ್ಯಂತ ಸಿಹಿ ವ್ಯಕ್ತಿಗಳಲ್ಲಿ ಒಬ್ಬರು! ಭರತನಾಟ್ಯವನ್ನು ನಿಮಗೆ ಕಲಿಸುವುದು ತುಂಬಾ ಸುಂದರವಾದ ಅನುಭವವಾಗಿತ್ತು ಮತ್ತು ಚಾಂದ್ ಮೇರಾ ದಿಲ್‌ನಲ್ಲಿ ನಿಮ್ಮ ಅಭಿನಯವನ್ನು ನೀವು ಸಂಪೂರ್ಣವಾಗಿ ಅದ್ಭುತವಾಗಿಸಿದ್ದೀರಿ' ಎಂದು ಬರೆದಿದ್ದಾರೆ.
ಅನಿತಾ ಆರ್. ರತ್ನಂ ಮತ್ತು ಕೃತಿಕಾ ಶಿವಸ್ವಾಮಿ ಅವರಂತಹ ಶಾಸ್ತ್ರೀಯ ನೃತ್ಯಗಾರರು, ನಟಿಯನ್ನು ಶಾಸ್ತ್ರೀಯ ಕಲಾ ಪ್ರಕಾರವನ್ನು ಅವಮಾನಿಸಿದ್ದಕ್ಕಾಗಿ ಟೀಕಿಸಿದ್ದಾರೆ. ಅನನ್ಯಾ ಪಾಂಡೆ ಇನ್ನೂ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Advertisement