

ಇತ್ತೀಚಿಗೆ ಬಿಡುಗಡೆಯಾದ ಬಾಲಿವುಡ್ ಸಿನಿಮಾ 'ಚಂದ್ ಮೇರಾ ದಿಲ್' ನಲ್ಲಿ ನಟಿ ಅನನ್ಯಾ ಪಾಂಡೆ ಅವರ ಭರತನಾಟ್ಯ ಸನ್ನಿವೇಶ ಟ್ರೋಲ್ ಗೆ ಒಳಗಾಗಿದೆ. ಸಿನಿಮಾದಲ್ಲಿನ ಅವರ ಭರತನಾಟ್ಯ ನೃತ್ಯಕ್ಕೆ ಇಂಟರ್ನೆಟ್‌ನಲ್ಲಿ ತೀವ್ರ ಟೀಕೆ ಮತ್ತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಮಿಮ್ಸ್ ಮೂಲಕ ಸಖತ್ ಆಗಿ ಟ್ರೋಲ್ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಅನನ್ಯಾ ಪಾಂಡೆ ಅವರು ಭರತನಾಟ್ಯದಲ್ಲಿ ತರಬೇತಿ ಪಡೆದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಚಾಂದನಿ ಪಾತ್ರ ಮಾಡಿದ್ದಾರೆ. ಅವರ ಧರಿಸಿರುವ ಡಿಸೈನರ್ ಲೆಹೆಂಗಾ ಮತ್ತು ಮಾಡಿರುವ ನೃತ್ಯದ ಶೈಲಿಯು ಸಾಂಪ್ರದಾಯಿಕ ಕಲೆಗೆ ಅಪಮಾನವಾಗಿದೆ ಎಂದು ಹಲವು ನೃತ್ಯ ಪ್ರಿಯರು ಮತ್ತು ನೆಟ್ಟಿಗರು ಟೀಕಿಸಿದ್ದಾರೆ.
ಕ್ರಿಪೂ 200 ರಲ್ಲಿ ಬಂದ ಭರತನಾಟ್ಯ 2026ರಲ್ಲಿ ಅನನ್ಯಾ ಪಾಂಡೆ ಅವರೊಂದಿಗೆ ಕೊನೆಯಾಗಿದೆ ಎಂದು ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡು ನಂತರ ಈ ಚರ್ಚೆ ಆರಂಭವಾಯಿತು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಲವು ನೆಟ್ಟಿಗರು ಅನನ್ಯಾ ಪಾಂಡೆ ಅವರ ಭರತ ನಾಟ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಅದನ್ನು ಸಿನಿಮಾ ದೃಷ್ಟಿಯಿಂದ ನೋಡಬೇಕು ಎಂದು ಹೇಳುವ ಮೂಲಕ ಅನನ್ಯಾ ಪಾಂಡೆ ಅವರ ಭರತ ನಾಟ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಚಾಂದ್ ಮೇರಾ ದಿಲ್ ಚಿತ್ರ ಬಿಡುಗಡೆಯಾದ ಮೂರನೇ ದಿನಕ್ಕೆ ಭಾರತದಲ್ಲಿ ಅಂದಾಜು 2.26 ಕೋಟಿ ರೂ. ಗಳಿಸಿತ್ತು. ಇದರೊಂದಿಗೆ ದೇಶದಲ್ಲಿ ಒಟ್ಟು ಕಲೆಕ್ಷನ್ ₹10.68 ಕೋಟಿಗೆ ಏರಿದೆ ಎನ್ನಲಾಗಿದೆ. ಆದರೆ ಇನ್ನೂ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.
Advertisement