ನಟ ಮೊಹ್ಸಿನ್ ಖಾನ್ ಜೊತೆ ಮದುವೆಯಾದ ತಮನ್ನಾ, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೆ!

ಮೊಹ್ಸಿನ್ ಖಾನ್ ಅವರು ತಮನ್ನಾ ಜೊತೆಗಿನ ವಿಶೇಷ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ದಿ ಡೇ, ಮಾಶಾ ಅಲ್ಲಾ” ಎಂದು ಶೀರ್ಷಿಕೆ ನೀಡಿದ್ದಾರೆ.
TV actor Mohsin Khan marries Tamanna months after engagement
ಮೊಹ್ಸಿನ್ ಖಾನ್ ಮತ್ತು ತಮನ್ನಾ ವಿವಾಹ
Updated on: 

ಮುಂಬೈ: ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿ ಖ್ಯಾತಿಯ ನಟ ಮೊಹ್ಸಿನ್ ಖಾನ್ ಅವರು ತಮನ್ನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇದೀಗ ಮದುವೆ ಸಂಭ್ರಮದಲ್ಲಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಮೊಹ್ಸಿನ್ ಖಾನ್ ಅವರು ತಮನ್ನಾ ಜೊತೆಗಿನ ವಿಶೇಷ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, “ದಿ ಡೇ, ಮಾಶಾ ಅಲ್ಲಾ” ಎಂದು ಶೀರ್ಷಿಕೆ ನೀಡಿದ್ದಾರೆ.

ಈ ಪೋಸ್ಟ್ ಬಳಿಕ ಅಭಿಮಾನಿಗಳು ಹಾಗೂ ಆಪ್ತರಿಂದ ನವಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

TV actor Mohsin Khan marries Tamanna months after engagement
'ಸ್ಕರ್ಟ್`ನೊಳಗೆ ಕಣ್ಣು ಹಾಕೋದ್ ಅಲ್ಲ... 5 ದಿನ ಒಪ್ಪಿ, 6ನೇ ದಿನ ಇಲ್ಲ ಎಂದರೂ.. ಅದನ್ನ ಗೌರವಿಸಬೇಕು’: ನಟಿ Janhvi Kapoor ಕೆಂಡಾಮಂಡಲ

ಮದುವೆ ಸಂಭ್ರಮದ ಫೋಟೋ ವೈರಲ್

ಫೋಟೋದಲ್ಲಿ ಮೊಹ್ಸಿನ್ ಖಾನ್ ಕಪ್ಪು-ಬಿಳಿ ಸೂಟ್‌ನಲ್ಲಿ ಕಾಣಿಸಿಕೊಂಡರೆ, ತಮನ್ನಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಇಬ್ಬರೂ ಒಟ್ಟಿಗೆ ಪೋಸ್ ನೀಡಿದ್ದಾರೆ.

ಮೊಹ್ಸಿನ್ ಅವರ ಪೋಸ್ಟ್ ಹೊರಬಂದ ಕೆಲವೇ ಸಮಯದಲ್ಲಿ ಮದುವೆ ಸಂಭ್ರಮದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದವು. ವಿಡಿಯೋಗಳಲ್ಲಿ ಮೊಹ್ಸಿನ್ ಮತ್ತು ತಮನ್ನಾ ಕುಟುಂಬದವರು ಹಾಗೂ ಆಪ್ತರೊಂದಿಗೆ ನೃತ್ಯ ಮಾಡುತ್ತಾ ಸಂಭ್ರಮಿಸುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ.

ಆಗಸ್ಟ್‌ನಲ್ಲಿ ನಡೆದಿದ್ದ ನಿಶ್ಚಿತಾರ್ಥ

ಮೊಹ್ಸಿನ್ ಖಾನ್ ಮತ್ತು ತಮನ್ನಾ 2026ರ ಆಗಸ್ಟ್‌ನಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆ ಸಂದರ್ಭದಲ್ಲಿ ನಟ ನಿಶ್ಚಿತಾರ್ಥ ಸಮಾರಂಭದ ಫೋಟೋಗಳನ್ನು ಹಂಚಿಕೊಂಡು, ತಮನ್ನಾ ಜೊತೆಗಿನ ಸಂಬಂಧದ ಬಗ್ಗೆ ಭಾವುಕ ಬರಹವನ್ನೂ ಪೋಸ್ಟ್ ಮಾಡಿದ್ದರು.

ತಮನ್ನಾ ಅವರನ್ನು ತಮ್ಮ “Person” ಎಂದು ಕರೆದಿದ್ದ ಮೊಹ್ಸಿನ್, ಮೊದಲ ಬಾರಿ ಇಬ್ಬರೂ ಪರಸ್ಪರ ನೋಡಿಕೊಂಡ ಕ್ಷಣದಿಂದ ಹಿಡಿದು, ಅವರ ಕೈ ಹಿಡಿದ ಕ್ಷಣ ಹಾಗೂ ತಮನ್ನಾ ಹಾಡಿದ ಕ್ಷಣದವರೆಗಿನ ನೆನಪುಗಳನ್ನು ಹಂಚಿಕೊಂಡಿದ್ದರು. ಮೊಹ್ಸಿನ್ ಖಾನ್ ತಮ್ಮ ವೈಯಕ್ತಿಕ ಜೀವನವನ್ನು ಸಾಮಾನ್ಯವಾಗಿ ಸಾರ್ವಜನಿಕವಾಗಿ ಹೆಚ್ಚು ಹಂಚಿಕೊಳ್ಳದ ಕಾರಣ, ಅವರ ನಿಶ್ಚಿತಾರ್ಥದ ಘೋಷಣೆ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು.

‘ಕಾರ್ತಿಕ್ ಗೋಯೆಂಕಾ’ ಪಾತ್ರದಿಂದ ಜನಪ್ರಿಯತೆ

ಮೊಹ್ಸಿನ್ ಖಾನ್ ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ’ ಧಾರಾವಾಹಿಯಲ್ಲಿ ಕಾರ್ತಿಕ್ ಗೋಯೆಂಕಾ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಈ ಧಾರಾವಾಹಿಯಲ್ಲಿ ಶಿವಾಂಗಿ ಜೋಶಿ ನಿರ್ವಹಿಸಿದ್ದ ನೈರಾ ಪಾತ್ರದೊಂದಿಗೆ ಅವರ ಜೋಡಿ ಕಿರುತೆರೆ ಪ್ರೇಕ್ಷಕರಲ್ಲಿ ಭಾರಿ ಮೆಚ್ಚುಗೆ ಪಡೆದಿತ್ತು. ಮೊಹ್ಸಿನ್ ಮತ್ತು ಶಿವಾಂಗಿ ಜೋಡಿ ಧಾರಾವಾಹಿ ಲೋಕದ ಜನಪ್ರಿಯ ಆನ್‌ಸ್ಕ್ರೀನ್ ಜೋಡಿಗಳಲ್ಲಿ ಒಂದಾಗಿ ಗುರುತಿಸಿಕೊಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com