ಹುಟ್ಟುಹಬ್ಬದ ವೇಳೆ ಅಭಿಮಾನಿಗೆ ಹ್ಯಾಂಡ್ ಶೇಕ್ ನೀಡಲು ಬಿಗ್ ಬಿ ನಿರಾಕರಣೆ: Video ವೈರಲ್, ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆ!

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪರಿಸ್ಥಿತಿ ನಿರ್ವಹಣೆಯ ಕುರಿತು ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
Amitabh Bachchan
ಹ್ಯಾಂಡ್ ಶೇಕ್ ನೀಡಲು ಬಿಗ್ ಬಿ ನಿರಾಕರಣೆ
Updated on: 

ಮುಂಬೈ: ಹುಟ್ಟುಹಬ್ಬದ ವೇಳೆ ಬಾಲಿವುಡ್ ಬಿಗ್ ಬಿ ಅಮಿತ್ ಬಚ್ಚನ್ ಯುವ ಅಭಿಮಾನಿಯೊಬ್ಬರಿಗೆ ಹ್ಯಾಂಡ್ ಶೇಕ್ ನೀಡಲು ನಿರಾಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.

ಏನಾಯಿತು?

ಹೌದು. ಅಮಿತಾಬ್ ಬಚ್ಚನ್ ಅವರ ಹುಟ್ಟುಹಬ್ಬದ ದಿನವಾದ ಅಕ್ಟೋಬರ್ 11ರ ಭಾನುವಾರದಂದು ಅವರ ನಿವಾಸದ ಹೊರಗೆ ಜಮಾಯಿಸಿದ್ದ ಕೆಲ ಯುವ ಅಭಿಮಾನಿಗಳು, ಭದ್ರತಾ ತಡೆಗೋಡೆ ದಾಟಿ ಹ್ಯಾಂಡ್ ಶೇಕ್ ನೀಡಲು ಮುಂದಾಗಿದ್ದಾರೆ. ಆಗ ಅವರ ಅಂಗರಕ್ಷಕರು ಮಧ್ಯಪ್ರವೇಶಿಸಿದ್ದು, ಆ ಅಭಿಮಾನಿಯನ್ನು ದೂರ ತಳ್ಳಿದ್ದಾರೆ. ಬಿಗ್ ಬಿಗ್ ಕೂಡಾ ಸೌಜನ್ಯದಿಂದ ಹ್ಯಾಂಡ್ ಶೇಕ್ ನೀಡಲು ನಿರಾಕರಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪರಿಸ್ಥಿತಿ ನಿರ್ವಹಣೆಯ ಕುರಿತು ವೀಕ್ಷಕರಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಕೆಲವರು ಅಮಿತಾಬ್ ಬಚ್ಚನ್ ಆ ಯುವ ಅಭಿಮಾನಿಯ ಕೋರಿಕೆಯನ್ನು ಮನ್ನಿಸಬಹುದಿತ್ತು ಎಂದು ಭಾವಿಸಿದರೆ, ಇನ್ನು ಕೆಲವರು ಭದ್ರತಾ ವ್ಯವಸ್ಥೆಗಳನ್ನು ಗೌರವಿಸಬೇಕು ಮತ್ತು ಸೆಲೆಬ್ರಿಟಿಗಳಿಗೆ ತಮ್ಮ ವೈಯಕ್ತಿಕ ಗಡಿಗಳನ್ನು ಕಾಯ್ದುಕೊಳ್ಳುವ ಹಕ್ಕಿದೆ ಎಂದು ವಾದಿಸುತ್ತಿದ್ದಾರೆ.

ಬಿಗ್ ಬಿ ಅವರ 84ನೇ ಹುಟ್ಟುಹಬ್ಬ: ಅಮಿತಾಬ್ ಬಚ್ಚನ್ ಭಾನುವಾರ ಮುಂಬೈನಲ್ಲಿರುವ ತಮ್ಮ ನಿವಾಸ 'ಜಲ್ಸಾ'ದ ಹೊರಗೆ ಜಮಾಯಿಸಿದ್ದ ಅಭಿಮಾನಿಗಳನ್ನು ಭೇಟಿಯಾಗುವ ಮೂಲಕ ತಮ್ಮ 84ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

Amitabh Bachchan
ತಂದೆಯ ಹೆಸರಿನಲ್ಲಿ ಅಯೋಧ್ಯೆಯಲ್ಲಿ ಧರ್ಮಶಾಲೆ ನಿರ್ಮಿಸಲು ಅಮಿತಾಬ್ ಬಚ್ಚನ್ ಸಜ್ಜು; ಅನುಮತಿ ಕೋರಿ ಅರ್ಜಿ ಸಲ್ಲಿಕೆ!

ತಮ್ಮ ನೆಚ್ಚಿನ ತಾರೆಯನ್ನು ಒಮ್ಮೆ ನೋಡಲು ಮನೆಯ ಹೊರಗೆ ಸೇರಿದ್ದ ಅಪಾರ ಸಂಖ್ಯೆಯ ಅಭಿಮಾನಿಗಳತ್ತ ಕೈಬೀಸಿ ಮತ್ತು ಕೈಮುಗಿದು ನಮಸ್ಕರಿಸಿದರು ಹಾಗೂ ತಮ್ಮ ವಿಶೇಷ ದಿನದಂದು ಅಭಿಮಾನಿಗಳು ತೋರಿದ ಪ್ರೀತಿ ಮತ್ತು ಶುಭಾಶಯಗಳಿಗೆ ಧನ್ಯವಾದ ಅರ್ಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com