ಭಟ್ ಸಿನಿಮಾಗೆ ಮಿಲಿಯನ್ ಹಿಟ್

ಮಹೇಶ್ ಭಟ್‌ರ ಹೊಸ ಚಿತ್ರ ಖಾಮೋಶಿಯಾ ಯೂಟ್ಯೂಬ್...
ಖಾಮೋಶಿಯಾ  ಚಿತ್ರ
ಖಾಮೋಶಿಯಾ ಚಿತ್ರ

ಮಹೇಶ್ ಭಟ್‌ರ ಹೊಸ ಚಿತ್ರ ಖಾಮೋಶಿಯಾ ಯೂಟ್ಯೂಬ್ ದುನಿಯಾದಲ್ಲಿ ಹೊಸ ದಾಖಲೆ ಬರೆದಿದೆ. ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆದ ಕೇವಲ ಮೂವತ್ತಾರು ಗಂಟೆಗಳಲ್ಲಿ ಹತ್ತು ಲಕ್ಷ ಬಾರಿ ವೀಕ್ಷಣೆಗೊಳಗಾಗಿರುವ ಖಾಮೋಶಿಯಾ ಚಿತ್ರದ ಟ್ರೇಲರ್ ಆ ಮೂಲಕ ಹಿಂದಿ ಚಿತ್ರರಂಗದಲ್ಲಿ ಸ್ಟಾರ್‌ಗಳ ಹೊರತಾಗಿ ಇಷ್ಟು ವೇಗವಾಗಿ ಇಷ್ಟೊಂದು ಹಿಟ್ ಪಡೆದಿರುವ ಮೊದಲ ಚಿತ್ರವೆಂಬ ಖ್ಯಾತಿ ಪಡೆದಿದೆ.

ಒಂದು ಪುಸ್ತಕ ಬರೆದು ಖ್ಯಾತಿನಾದ ಬರಹಗಾರನೋಬ್ಬನ ವೈಯಕ್ತಿಕ ಬದುಕು ಹಾಗೂ ಒಂದು ಕೊಲೆಯ ಸುತ್ತ ನಡೆಯುವ ಈ ಚಿತ್ರ ಈಗಾಗಲೇ ತನ್ನ ಹಾಡುಗಳಿಂದ ಮೋಡಿ ಮಾಡಿದ್ದು ಜ.31ರಂದು ಚಿತ್ರ ಜಗ್ತತಿನಾದ್ಯಂತ ಬಿಡುಗಡೆಯಾಗಲಿದೆ.

ಅರ್ಜಿತ್ ಸಿಂಗ್ ದನಿಯಲ್ಲಿ ಬಂದಿರುವ ಹಾಡೊಂದು ಈಗಾಗಲೇ ಚಾರ್ಟ್ ಟಾಪರ್ ಆಗಿದೆ. ಎಂದಿನ ಮಹೇಶ್‌ಭಟ್ ಚಿತ್ರಗಳನ್ನು ಮೀರಿಸುವ ಹಾಟ್ ದೃಶ್ಯಗಳು ಈ ಚಿತ್ರದಲ್ಲಿದ್ದು ಚಳಿಗಾಳಕ್ಕೆ ಹೇಳಿಮಾಡಿಸಿದ ಸಿನಿಮಾವಿದು ಎಂದು ಚಿತ್ರ ಪ್ರೇಮಿಗಳು ಮಾತನಾಡಿಕೊಳ್ಳುತ್ತಿದ್ದಾರೆ.

ವಿಡಿಯೊಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com