

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ 'ಪಿಕೆ' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾದ ಮೂರೇ ದಿನದಲ್ಲಿ ಬರೋಬ್ಬರಿ 95 ಕೋಟಿ ಗಳಿಕೆ ಮಾಡಿದೆ ಎಂದು ಚಿತ್ರದ ನಿರ್ಮಾಪಕರು ಹೇಳಿದ್ದಾರೆ.
ರಾಜ್‌ಕುಮಾರ್ ಹಿರಾನಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಪಿಕೆ ಚಿತ್ರ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಮೀರ್ ಖಾನ್ ಹಾಗೂ ಅನುಷ್ಕ ಶರ್ಮಾರ ಅಭಿನಯ ಹಾಗೂ ಚಿತ್ರದ ಸಂಗೀತ ಅಭಿಮಾನಿಗಳನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ.
ಜಗತ್ತಿನಾದ್ಯಂತ ಸುಮಾರು 6000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಚಿತ್ರ ಭಾರತದಲ್ಲಿ ಮಾತ್ರ ಬರೋಬ್ಬರಿ ಕಲೆಕ್ಷನ್ ಮಾಡುತ್ತಾ ಮುನ್ನುಗುತ್ತಿದೆ. ಶುಕ್ರವಾರ ತೆರೆ ಕಂಡ ಚಿತ್ರ ಸುಮಾರು 26.63 ಕೋಟಿ ರುಪಾಯಿ ಬಾಚಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಶನಿವಾರ ಬಾಕ್ಸ್ ಆಫೀಸ್ ಕಲೆಕ್ಷನ್‌ನಲ್ಲಿ 30.34 ಕೋಟಿ ರುಪಾಯಿ ಗಳಿಸಿತು. ರಜೆದಿನವಾದ ಭಾನುವಾರ ಬರೋಬ್ಬರಿ 38 ಕೋಟಿ ಕಲೆಕ್ಷನ್ ಮಾಡಿ 100 ಕೋಟಿ ಕ್ಲಬ್ ಸೇರಲಿದೆ.