ಕೊಹ್ಲಿ-ಅನುಷ್ಕಾ ವಿರಸಕ್ಕೆ ಕಾರಣವಾಯ್ತೆ ಹಾಟ್ ಫೋಟೋಶೂಟ್?

ಅಗ್ರೇಸಿವ್ ಬ್ಯಾಟ್ಸ್‌ಮನ್ ಎಂದೇ ಖ್ಯಾತಿ...
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ(ಸಂಗ್ರಹ ಚಿತ್ರ)
ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ(ಸಂಗ್ರಹ ಚಿತ್ರ)

ಅಗ್ರೇಸಿವ್ ಬ್ಯಾಟ್ಸ್‌ಮನ್ ಎಂದೇ ಖ್ಯಾತಿ ಗಳಿಸಿರುವ ವಿರಾಟ್ ಕೊಹ್ಲಿ ಇದೀಗ ತನ್ನ ಅಗ್ರೇಸಿವ್ ತನವನ್ನು ಪ್ರಿಯತಮೆ ಅನುಷ್ಕಾ ಶರ್ಮಾ ಮೇಲೆ ತೋರಿಸಿದ್ದಾರೆ.

ಪುರುಷರ ಮ್ಯಾಗಜೀನ್ ಒಂದಕ್ಕೆ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅರೆಬರೆ ಬಟ್ಟೆ ಧರಿಸಿ ಫೋಸ್ ನೀಡಿರುವುದರಿಂದ ಸಿಕ್ಕಾಪಟ್ಟೆ ಕೋಪಗೊಂಡಿರುವ ವಿರಾಟ್ ಕೊಹ್ಲಿ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇಂತ ಫೋಟೋ ಶೂಟನ್ನು ನೋಡಿದ ವಿರಾಟ್ ಕೊಹ್ಲಿ ಕೋಪಬಂದಿದ್ದು, ಸದ್ಯ ಆಸ್ಟ್ರೇಲಿಯ ಪ್ರವಾಸದಲ್ಲಿರುವ ಕೊಹ್ಲಿ ದೂರವಾಣಿ ಕರೆ ಮಾಡಿ ಬೈದಿದ್ದಾರಂತೆ ಹಾಗಂತ ಅನುಷ್ಕಾ ಶರ್ಮಾ ಏನು ಸುಮ್ಮನೆ ಕೇಳಿಸಿಕೊಂಡಿಲ್ಲ ಕುಳಿತಿಲ್ಲ. ಇದು ತನ್ನ ವೃತ್ತಿಗೆ ಸಂಬಂಧಪಟ್ಟಿದ್ದು ಎಂಬ ಪ್ರತ್ಯತ್ತರವನ್ನು ಕೊಹ್ಲಿಗೆ ನೀಡಿದ್ದಾರೆ. ಹೀಗಾಗಿ ಈ ಇಬ್ಬರ ನಡುವಿನ ವಿರಸಕ್ಕೆ ಕಾರಣವಾಗಿದೆ ಹಾಟ್ ಫೋಟೋ ಶೂಟ್.

ಇತ್ತೀಚೆಗಷ್ಟೇ ಈ ಎರಡು ಜೋಡಿ ಮಾಧ್ಯಮದ ಮುಂದೆ ತಮ್ಮ ನಡುವಿನ ಸಂಬಂಧವನ್ನು ಬಹಿರಂಗಪಡಿಸಿದ್ದರು. ಅನುಷ್ಕಾರೊಂದಿಗೆ ಮದುವೆಗೆ ವಿರಾಟ್ ಕೊಹ್ಲಿ ಮನೆಯವರೂ ಒಪ್ಪಿಗೆ ನೀಡಿದ್ದಾರೆಂದು ವಿರಾಟ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com