ಯೋಗರಾಜ್ ಭಟ್ರು ಇನ್ಮುಂದೆ ವಿತರಕರೂ ಹೌದು!

ನಿರ್ದೇಶನ, ನಿರ್ಮಾಣ, ಕಥೆ, ಸಂಭಾಷಣೆ, ಗೀತ ರಚನೆ, ನಟನೆ... ಹೀಗೆ ಎಲ್ಲ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ...
ಯೋಗರಾಜ್ ಭಟ್
ಯೋಗರಾಜ್ ಭಟ್
Updated on

ನಿರ್ದೇಶನ, ನಿರ್ಮಾಣ, ಕಥೆ, ಸಂಭಾಷಣೆ, ಗೀತ ರಚನೆ, ನಟನೆ... ಹೀಗೆ ಎಲ್ಲ ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನಿರ್ದೇಶಕ ಯೋಗರಾಜ್ ಭಟ್ ಈಗ ಸಿನಿಮಾ ವಿತರಣೆಗೂ ಕೈ ಹಾಕಿದ್ದಾರೆ.

ಸದ್ಯ `ವಾಸ್ತುಪ್ರಕಾರ' ಚಿತ್ರದ ಗೆಲುವಿನ ಸಂಭ್ರಮದಲ್ಲಿರುವ ಭಟ್ಟರು, ಸಿನಿಮಾ ವಿತರಣೆಗೆ ಕೈ ಹಾಕಿ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ  ಮುಂದಿಡುವುದಕ್ಕೆ ಮುನ್ನುಡಿ ಹಾಕಿದ್ದಾರೆ. ಸಿನಿಮಾ ವಿತರಣೆಗಾಗಿ ತಮ್ಮದೇ ಆದ ಒಂದು  ತಂಡವನ್ನು ಕಟ್ಟಿರುವ ಭಟ್ಟರು, ಈಗ ಸಣ್ಣ ಮತ್ತು ಮೀಡಿಯಂ ಬಜೆಟ್ಟಿನ ಚಿತ್ರಗಳನ್ನು ಮೊದಲು ವಿತರಣೆ ಮಾಡುವ ಪ್ಲಾನ್ ಮಾಡಿಕೊಂಡಿದ್ದಾರೆ.

ಜಗ್ಗೇಶ್, ರಕ್ಷಿತ್ ಶೆಟ್ಟಿ, ಐಶಾನಿ ಶೆಟ್ಟಿ, ಪಾರೂಲ್ ಯಾದವ್, ಅನಂತ್‍ನಾಗ್ ಹಾಗೂ ಸುಧಾರಾಣಿ ಅಭಿನಯದ `ವಾಸ್ತುಪ್ರಕಾರ' ಸಿನಿಮಾ ದೊಡ್ಡ ಮಟ್ಟದಲ್ಲಿ ಗೆದ್ದ ಮೇಲೆ ಇಡೀ ತಂಡ ಸೇರಿಕೊಂಡು ಸಿನಿಮಾ ವಿತರಣೆಯನ್ನೂ ಯಾಕೆ ಮಾಡಬಾರದು? ಎನ್ನುವ ಯೋಚನೆಯಲ್ಲಿ ಹುಟ್ಟಿಕೊಂಡ ಐಡಿಯಾಗೆ ಯೋಗರಾಜ್ ಭಟ್ ಸೂತ್ರಧಾರರಾಗಿ ಕೆಲಸ ಮಾಡುತ್ತಿದ್ದಾರೆ.

ಅಂದರೆ ಈ ಸಿನಿಮಾ ವಿತರಣೆಗಾಗಿಯೇ ಯೋಗರಾಜ್ ಭಟ್ ಕಟ್ಟಿರುವ ಈ ತಂಡದಲ್ಲಿ ಪ್ರಮುಖವಾಗಿ ಐದು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ನನ್ನದೇನು ಇಲ್ಲ. ಎಲ್ಲ
ಗೆಳೆಯರು ಸೇರಿಕೊಂಡು ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಇಡುತ್ತಿದ್ದೇವೆ. ನನಗಿಂತ ಇಲ್ಲಿ ಕೆಲಸ ಮಾಡುತ್ತಿರುವ  ಐದು ಮಂದಿ ಮುಖ್ಯ. ಮುಂದೆ ನಮ್ಮ ಜತೆ ಬೇರೆ ಬೇರೆ ವಿತರಕರು ಬಂದು ಸೇರಿಕೊಳ್ಳಲಿದ್ದಾರೆ. ಯೋಗರಾಜ್ ಮೂವೀಸ್ ಬ್ಯಾನರ್‍ನಲ್ಲಿ ಈ ವಿತರಣೆ ಮಾಡುತ್ತಿದ್ದೇನೆ. ಮೊದಲಿಗೆ ಸಣ್ಣ ಹಾಗೂ ಮಧ್ಯಮ ಬಜೆಟ್ ಚಿತ್ರಗಳನ್ನು ವಿತರಿಸಿ ನಂತರ ಬಿಗ್ ಬಜೆಟ್ ಚಿತ್ರಗಳನ್ನು ವಿತರಣೆ ಮಾಡುವ ಯೋಚನೆ ಇದೆ. ಚಿತ್ರಮಂದಿರಗಳು ಸೇರಿದಂತೆ ಒಟ್ಟಾರೆ ವಿತರಣೆಗೆ ಮಾರ್ಗದರ್ಶನ ಮಾಡುವುದಕ್ಕಾಗಿ ಹಲವು ವಿತರಕರು ನಮ್ಮ ತಂಡದ ಜತೆಗೆ ಇದ್ದಾರೆ' ಎನ್ನುವ ನಿರ್ದೇಶಕ ಯೋಗರಾಜ್ ಭಟ್, ನಿರ್ದೇಶನದಂಥ ದೊಡ್ಡ ಜವಾಬ್ದಾರಿಯ ಜತೆಗೆ ಮತ್ತೊಂದು ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದಾರೆ.

ಅಂದಹಾಗೆ ಭಟ್ಟರ ಸಿನಿಮಾ ವಿತರಣಾ ತಂಡಕ್ಕೆ ಎನ್.ಕುಮಾರ್ ಮಾರ್ಗದರ್ಶಕರಾಗಿ, ವಿತರಣೆ ವ್ಯವಸ್ಥೆಯಲ್ಲಿ ನೆರವು ನೀಡಲು ನಿರ್ಮಾಪಕ ಕನಕಪುರ ಶ್ರೀನಿವಾಸ್ ಈ ತಂಡದಲ್ಲಿ ಇದ್ದಾರೆ. ಇವರ ಜತೆಗೆ ಇಡೀ ತಂಡದ ಆಡಳಿತ ಉಸ್ತುವಾರಿ ನೋಡಿಕೊಳ್ಳುವುದಕ್ಕಾಗಿ ರಮೇಶ್ ಹಾಗೂ ಸುಧೀರ್ ಅವರು ಇದ್ದಾರೆ. ಇವರೆಲ್ಲರ ಬೆನ್ನ ಹಿಂದೆ ಯೋಗರಾಜ್ ಭಟ್ ಇರುತ್ತಾರೆ. ಸದ್ಯ ಭಟ್ಟರ ನಿರ್ಮಾಣದ, ಕ್ರಿಷ್ ಜೋಷಿ ನಿರ್ದೇಶನದ `ಪರಪಂಚ' ಚಿತ್ರ ಕೂಡ ಚಿತ್ರೀಕರಣ ಮುಗಿಸಿಕೊಂಡು ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರುತ್ತಿದೆ. ಈ ಚಿತ್ರದಲ್ಲಿ ನಟ ದಿಗಂತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com