ಇದೇ ತಿಂಗಳಲ್ಲಿ `ಹಿಟ್ ವಿಕೆಟ್' ಆರಂಭ

ಮೂರು ವರ್ಷಗಳ ಹಿಂದೆ `ಬಿಸಿಲೆ’ ಎನ್ನುವ ಚಿತ್ರವೊಂದು ಬಂದಿತ್ತು ನಿಮಗೆ ನೆನಪಿರಬಹುದು. ದಿಗಂತ್ ನಾಯಕನಾಗಿ ನಟಿಸಿದ್ದ ಚಿತ್ರವನ್ನು ಯುವ ನಿರ್ದೇಶಕ...
ಅಪೂರ್ವ ರೈ
ಅಪೂರ್ವ ರೈ

ಮೂರು ವರ್ಷಗಳ ಹಿಂದೆ `ಬಿಸಿಲೆ’ ಎನ್ನುವ ಚಿತ್ರವೊಂದು ಬಂದಿತ್ತು ನಿಮಗೆ ನೆನಪಿರಬಹುದು. ದಿಗಂತ್ ನಾಯಕನಾಗಿ ನಟಿಸಿದ್ದ ಚಿತ್ರವನ್ನು ಯುವ ನಿರ್ದೇಶಕ ಸಂದೀಪ್ ಗೌಡ ನಿರ್ದೇಶಿಸಿದ್ದರು. ಈಗ ಅದೇ ಸಂದೀಪ್ ಗೌಡ ಮತ್ತು ದಿಗಂತ್ ಕಾಂಬಿನೇಷನ್ ಮತ್ತೆ ಒಂದಾಗಿದೆ.

`ಹಿಟ್ ವಿಕೆಟ್’ ಎನ್ನುವುದು ಚಿತ್ರದ ಹೆಸರು. ಒಬ್ಬ ಕ್ರಿಕೆಟ್ ಆಟಗಾರನ ಖಾಸಗಿ ಜೀವನ ಹೇಗಿರುತ್ತದೆ ಎನ್ನುವುದು ಚಿತ್ರದ ತಿರುಳು. ಈ ಚಿತ್ರದ ವಿಶೇಷತೆಯೆಂದರೆ ಮೊಟ್ಟ ಮೊದಲ ಬಾರಿಗೆ ಒಂದೇ ಚಿತ್ರಕ್ಕೆ ಐದು ಜನ ಸಂಗೀತ ನಿರ್ದೇಶಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಿಥುನ್, ಗಗನ್, ವಿವೇಕ್, ಜೂಡಾ ಮತ್ತು ಅಭಿಮನ್ ಈ ಚಿತ್ರದ ಸಂಗೀತ ನಿರ್ದೇಶಕರುಗಳು.

ಈ ಚಿತ್ರದಲ್ಲಿ ದಿಗಂತ್ ಜೊತೆಗೆ ಅಪೂರ್ವ ರೈ ಎಂಬ ಕನ್ನಡದ ಹುಡುಗಿ ನಟಿಸುತ್ತಿದ್ದಾಳೆ.  ಅಪೂರ್ವ ರೈ ಈಗಾಗಲೇ ತಮಿಳಿನಲ್ಲಿ ಅರ್ಜುನ್ ಸರ್ಜಾ ಅವರೊಂದಿಗೆ ನಟಿಸುತ್ತಿದ್ದು. ಕನ್ನಡದಲ್ಲಿ `ಹಿಟ್ ವಿಕೆಟ್’ ಮೊದಲ ಚಿತ್ರವಾಗಿದೆ. ಇನ್ನು ಈ ಚಿತ್ರದ ಬಹುಮುಖ್ಯ ಪಾತ್ರವೊಂದರಲ್ಲಿ ಅನಂತ್ ನಾಗ್ ಕಾಣಿಸಿಕೊಳ್ಳುತ್ತಿದ್ದಾರೆ.

ಒಟ್ಟಾರೆ `ಹಿಟ್ ವಿಕೆಟ್’ ಮುಹೂರ್ತಕ್ಕೆ ಅಣಿಯಾಗುತ್ತಿದ್ದು, ಇದೇ ತಿಂಗಳ ಕೊನೆಗೆ ಸೆಟ್ಟೇರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com