

ಬೆಂಗಳೂರು: ರಂಗಿತರಂಗ ಟ್ರೇಲರ್ ಕನ್ನಡ ಚಿತ್ರೋದ್ಯಮದ ನಿರ್ದೇಶಕರ ಮತ್ತು ನಟರ ಗಮನ ಸೆಳೆದಿದೆ. ಈ ಟ್ರೇಲರ್ ಬಗ್ಗೆ ಸುನಿ, ಪವನ್ ಕುಮಾರ್, ರಕ್ಷಿತ್ ಶೆಟ್ಟಿ ಮತ್ತು ಶ್ರೀಮುರಳಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಟ್ರೇಲರ್ ಅನ್ನು ಇತ್ತೀಚಿಗೆ ಹಾಡಿಹೊಗಳಿದ್ದು ನಟ ಯಶ್. ಈ ಟ್ರೇಲರ್ ನಿಂದ ಬಹಳಷ್ಟು ಪ್ರಭಾವಿತರಾಗಿರುವ ಯಶ್, ಸಿನೆಮಾಗೆ ಯಾವ ರೀತಿಯ ಸಹಾಯವನ್ನು ಮಾಡಲು ಸಿದ್ಧನಿದ್ದೇನೆ ಎಂದಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಂದ ಚೊಚ್ಚಲ ನಿರ್ದೇಶಕ ಅನೂಪ್ ಭಂಡಾರಿ ಕಲಿಯಲು ಉತ್ಸುಕರಿದ್ದಾರೆ. "ಟ್ರೇಲರ್ ನೋಡಿದ ಮೇಲೆ ಯಶ್ ಅವರು ನಾವು ಶ್ರೀರಂಗಪಟ್ಟಣದಲ್ಲಿ ಚಿತ್ರೀಕರಣ ಮಾಡುವಾಗ ಭೇಟಿ ಮಾಡಿದರು. ವಿರಾಮದ ವೇಳೆಯಲ್ಲಿ ನಮ್ಮ ಜೊತೆ ೪೫ ನಿಮಿಷ ಅವರು ಮಾತನಾಡಿದರು. ಲ್ಯಾನ್ಸ್ ಕಪ್ಲಾನ್ ಮತ್ತು ವಿಲಿಯಂ ಡೇವಿಡ್ ಅವರ ಚಿತ್ರೀಕರಣವನ್ನು ಅವರು ಪ್ರಶಂಸಿಸಿದರು" ಎನ್ನುತ್ತಾರೆ ನಿರ್ದೇಶಕ.
ಯು/ಎ ಪ್ರಮಾಣಪತ್ರದೊಂದಿಗೆ ಸಿನೆಮಾ ಸೆನ್ಸಾರ್ ಮಂಡಲಿಯ ಒಪ್ಪಿಗೆ ಪಡೆದಿದೆ. ಯಶ್ ಅಂತಹ ಸ್ಟಾರ್ ಗಳಿಂದ ಹೆಚ್ಚಿನ ಪ್ರಚಾರ ಸಹಾಯವನ್ನು ಚಿತ್ರತಂಡ ನಿರೀಕ್ಷಿಸಿದೆ. "ಸ್ಟಾರ್ ಗಳ ಬೆಂಬಲ ಅತ್ಯಗತ್ಯ ಎಕೆಂದರ ಅವರಿಗೆ ಅಪಾರ ಅಭಿಮಾನಿಗಳಿರುತ್ತಾರೆ. ಯಶ್ ಅವರಿಂದ ನಮ್ಮ ಕೆಲಸದ ಬಗ್ಗೆ ಅಭಿಪ್ರಾಯ ಕೇಳಿ ಬೈಟ್ ಗಳನ್ನು ತೆಗೆದುಕೊಳ್ಳುತ್ತೇವೆ. ನಾವು ಬಿಡುಗಡೆ ದಿನಾಂಕವನ್ನು ಗೊತ್ತುಪಡಿಸಿಕೊಂಡ ಮೇಲೆ ಅವರಿಗೆ ತಿಳಿಸುತ್ತೇನೆ" ಎನ್ನುತ್ತಾರೆ ಅನೂಪ್.
ಸಿನೆಮಾಟೋಗ್ರಾಫರ್ ಲ್ಯಾನ್ಸ್ ಇಲ್ಲಿನವರಲ್ಲವಾಗಿದ್ದರಿಂದ ಅವರಿಗೆ ಯಶ್ ಬಗ್ಗೆ ತಿಳಿದಿರಲಿಲ್ಲ. "ಈ ಸ್ಟಾರ್ ಅವರ ಎತ್ತರದ ಸ್ಥಾನವನ್ನು ನಾವು ಅವರಿಗೆ ವಿವರಿಸಿದ ಮೇಲೆ ಅವರಿಗೆ ಸಂತಸವಾಯಿತು. ಹಾಗು ನಮ್ಮ ಸಿನೆಮಾ ಚೆನ್ನಾಗಿದೆ ಎಂದು ಟಾಮ್ ಕ್ರ್ಯೂಸ್ ಹೇಳಿದಂತೆ ಎಂದು ಅವರು ತಿಳಿಸಿದರು. ಪ್ರೇಕ್ಷಕರು ಕೂಡ ಇದೇ ಮೆಚ್ಚಿಗೆಯನ್ನು ತೋರಿಸುತ್ತಾರೆ ಎಂದು ನಂಬಿದ್ದೇವೆ" ಎನ್ನುತ್ತಾರೆ ಅನೂಪ್.