ಉಪ್ಪಿ ೨ ಮೊದಲ ದಿನವೇ ದಾಖಲೆ ಗಳಿಕೆ

ಬಹಳ ನಿರೀಕ್ಷೆಯ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ನೆನ್ನೆ ಕರ್ನಾಟಕದಾದ್ಯಂತ ಬಿಡುಗಡೆ ಕಂಡಿದ್ದು, ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವು ಪ್ರೇಕ್ಷಕರು ಉಪ್ಪಿ ಖದರ್ ಇದರಲ್ಲಿ ಇಲ್ಲ
ಉಪ್ಪಿ೨ ಕಟೌಟ್
ಉಪ್ಪಿ೨ ಕಟೌಟ್
Updated on

ಬೆಂಗಳೂರು: ಬಹಳ ನಿರೀಕ್ಷೆಯ ಉಪೇಂದ್ರ ನಿರ್ದೇಶನದ ಉಪ್ಪಿ೨ ಸಿನೆಮಾ ನೆನ್ನೆ ಕರ್ನಾಟಕದಾದ್ಯಂತ ಬಿಡುಗಡೆ ಕಂಡಿದ್ದು, ಮಿಶ್ರ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವು ಪ್ರೇಕ್ಷಕರು ಉಪ್ಪಿ ಖದರ್ ಇದರಲ್ಲಿ ಇಲ್ಲ ಎಂದರೆ ಇನ್ನೂ ಕೆಲವು ಅಭಿಮಾನಿಗಳು ಉಪ್ಪಿ ಹವಾ ಒಂಚೂರು ಕುಂದಿಲ್ಲ ಎನ್ನುತ್ತಾರೆ.

ಏನಾದರೂ ಆಗಲಿ ಗಲ್ಲಾಪೆಟ್ಟಿ ಗಳಿಕೆ ಮಾತ್ರ ಎಲ್ಲ ನಿರೀಕ್ಷೆಗಳನ್ನು ಹುಸಿಗೊಳಿಸಿ ಮೊದಲ ದಿನವೇ ದಾಖಲೆ ಗಳಿಕೆ ಕಂಡಿದೆ ಎನ್ನುತ್ತವೆ ಮೂಲಗಳು. ಮೂಲಗಳನ್ನು ನಂಬುವುದಾದರೆ ಉಪ್ಪಿ೨ ಕರ್ನಾಟಕದಲ್ಲೇ ಮೊದಲ ದಿನ ೯ ಕೋಟಿ ಗಳಿಕೆ ಕಂಡಿದೆಯಂತೆ. ಹೀಗೆ ಎಲ್ಲ ಕನ್ನಡ ಚಿತ್ರಗಳ ಮೊದಲ ದಿನನದ ದಾಖಲೆಯನ್ನು ನುಚ್ಚು ನೂರು ಮಾಡಿದೆ ಎನ್ನಲಾಗಿದೆ. ಇದೇ ಕುತೂಹಲವನ್ನು ಸಿನೆಮಾ ಕಾಯ್ದುಕೊಳ್ಳಲು ಸಾಧ್ಯವಾದರೆ ವಾರಾಂತ್ಯದ ಗಳಿಕೆ ೨೫ ಕೋಟಿ ಮೀರಲಿದೆ ಎನ್ನಲಾಗಿದೆ.

ಆಂಧ್ರ ಮತ್ತು ತೆಲಂಗಾಣದಲ್ಲಿ ಕೂಡ ಸಿನೆಮಾ ಮಂದಿರಗಳು ಮೊದಲ ದಿನ ೭೫% ತುಂಬಿದ್ದವು ಎಂದು ಮೂಲಗಳು ತಿಳಿಸಿವೆ. ಇದನ್ನು ಕಾಯ್ದುಕೊಂಡರೆ ಭಾನುವಾರದ ಅಂತ್ಯಕ್ಕೆ ಅಲ್ಲಿ ೨೦ಕೋಟಿ ಗಳಿಕೆ ಕಾಣಲಿದೆ ಎನ್ನಲಾಗುತ್ತಿದೆ. ಆದುದರಿಂದ ಎರಡು ಭಾಷೆಗಳಲ್ಲಿನ ಒಟ್ಟು ಗಳಿಕೆ ಭಾನುವಾರದ ಅಂತ್ಯಕ್ಕೆ ೪೫ ಕೋಟಿ ಮೀರಬಹುದು ಎಂಬುದು ಪಂಡಿತರ ಲೆಕ್ಕಾಚಾರ.

ಆದರೆ ಈ ಲೆಕ್ಕಾಚಾರಗಳಿಗೆ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಕೆಲವರು ಹಾಸ್ಯ ಮಾಡುತ್ತಿದ್ದು, ಉಪ್ಪಿ೨ ಸಿನೆಮಾದಲ್ಲಿ ವರ್ತಮಾನವನ್ನಷ್ಟೇ ಯೋಚಿಸಬೇಕೆಂದು ಉಪೇಂದ್ರ ಬೋಧಿಸುತ್ತಾರೆ. ಹೀಗೆ ಭವಿಷ್ಯದ ಗಳಿಕೆ ಲೆಕ್ಕಾಚಾರ ಹಾಕುವುದು ಸರಿಯೇ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com