ಶಿವಣ್ಣ-ಸುದೀಪ್ ಅಭಿನಯದ ಕಲಿ ಚಿತ್ರದ ಟೈಟಲ್ ಬಿಡುಗಡೆ ಸಮಾರಂಭ

ಜೋಗಿ ಪ್ರೇಮ್ ನಿರ್ದೇಶನದ ಶಿವರಾಜ್​ಕುಮಾರ್ ಮತ್ತು ಸುದೀಪ್ ನಟನೆಯ ಚಿತ್ರದ ಟೈಟಲ್ ಅನ್ನು ನಿನ್ನೆ ಅದ್ದೂರಿಯಾಗಿ ಲಾಂಚ್ ಮಾಡಲಾಯಿತು...
ಕಲಿ ಟೈಟಲ್ ಬಿಡುಗಡೆ
ಕಲಿ ಟೈಟಲ್ ಬಿಡುಗಡೆ
Updated on

ಜೋಗಿ ಪ್ರೇಮ್ ನಿರ್ದೇಶನದ ಶಿವರಾಜ್​ಕುಮಾರ್ ಮತ್ತು ಸುದೀಪ್ ನಟನೆಯ ಚಿತ್ರದ ಟೈಟಲ್ ಅನ್ನು ನಿನ್ನೆ ಅದ್ದೂರಿಯಾಗಿ ಲಾಂಚ್ ಮಾಡಲಾಯಿತು.

ಪ್ರೇಮ್ ಚಿತ್ರಕ್ಕೆ 'ಕಲಿ' ಎಂದು ಹೆಸರಿಟ್ಟಿದ್ದು, ಹೊಟೇಲ್ ಲಲಿತ್ ಅಶೋಕದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟೈಟಲ್ ಲಾಂಚ್ ಮಾಡಿದರು. ಸಚಿವ ಅಂಬರೀಶ್, ಜಗ್ಗೇಶ್, ರಾಕ್​ಲೈನ್ ವೆಂಕಟೇಶ್, ಗೀತಾ ಶಿವರಾಜ್​ಕುಮಾರ್, ಹರಿಪ್ರಿಯಾ, ರಕ್ಷಿತ್ ಶೆಟ್ಟಿ, ಸಾ.ರಾ. ಗೋವಿಂದು, ಗುರುಕಿರಣ್ ಆಗಮಿಸಿ ಶುಭ ಕೋರಿದರು.

'ಕಲಿ' ಶೀರ್ಷಿಕೆಯ ಕೆಳಗೆ ವಾರಿಯರ್ ಮತ್ತು ರೂಲರ್ ಎಂಬ ಅಡಿಬರಹ ಇದ್ದು, ಇದರಲ್ಲಿ ವಾರಿಯರ್ ಯಾರು ರೂಲರ್ ಯಾರು ಅನ್ನೋದನ್ನ ನಿರ್ದೇಶಕ ಪ್ರೇಮ್ ಅವರು ಸೀಕ್ರೆಟ್ ಆಗಿ ಇಟ್ಟಿದ್ದಾರೆ. ಜೊತೆಗೆ ಈ ಅಡಿಬರಹ ನೋಡುತ್ತಿದ್ದರೆ ಇದೊಂದು ಪಕ್ಕಾ ಆಕ್ಷನ್-ಓರಿಯೆಂಟೆಡ್ ಪೀರಿಯಡ್ ಸಿನಿಮಾ ಎನ್ನಲಾಗಿದೆ. ಅಲ್ಲದೇ ಯೋಧರ ಕಥೆಯನ್ನು ತೆರೆಯ ಮೇಲೆ ತರುವ ಪ್ರಯತ್ನವನ್ನು ನಿರ್ದೇಶಕ ಪ್ರೇಮ್ ಅವರು ಮಾಡಿದ್ದಾರೆ.

ಕಲಿ ಚಿತ್ರ ನೂರು ಕೋಟಿಯ ಬಜೆಟ್ ಎಂದು ಹೇಳಲಾಗುತ್ತಿದ್ದು, ಶಿವಣ್ಣ ಜತೆ ವಜ್ರಕಾಯ ಚಿತ್ರ ನಿರ್ಮಿಸಿದ್ದ ಸಿ.ಆರ್. ಮನೋಹರ್ ಬಂಡವಾಳ ಹೂಡುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com