ಆರ್ ಜಿ ವಿ 'ಕಿಲ್ಲಿಂಗ್ ವೀರಪ್ಪನ್' ಟ್ರೇಲರ್ ಪ್ರಶಂಸಿಸಿದ ಬಿಗ್ ಬಿ ಮತ್ತು ರಿತೇಶ್

ಮೊದಲ ಬಾರಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಟ್ರೇಲರ್ ನೋಡಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್
'ಕಿಲ್ಲಿಂಗ್ ವೀರಪ್ಪನ್' ನಲ್ಲಿ ವೀರಪ್ಪನ್ ಪಾತ್ರದಲ್ಲಿ ಸಂದೀಪ್ ಭಾರದ್ವಾಜ್
'ಕಿಲ್ಲಿಂಗ್ ವೀರಪ್ಪನ್' ನಲ್ಲಿ ವೀರಪ್ಪನ್ ಪಾತ್ರದಲ್ಲಿ ಸಂದೀಪ್ ಭಾರದ್ವಾಜ್

ಮುಂಬೈ: ಮೊದಲ ಬಾರಿಗೆ ಕನ್ನಡ ಚಿತ್ರವನ್ನು ನಿರ್ದೇಶಿಸಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಟ್ರೇಲರ್ ನೋಡಿ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ರಿತೇಶ್ ದೇಶಮುಖ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವರ್ಮಾ ಅವರ 'ಸರ್ಕಾರ್', 'ನಿಶಬ್ದ್', 'ರಾಮ್ ಗೋಪಾಲ್ ವರ್ಮಾ ಕಿ ಆಗ್' ಸಿನೆಮಾಗಳಲ್ಲಿ ನಟಿಸಿರುವ ಅಮಿತಾಬ್ " "https://youtu.be/Tc04wxTfaPY...  ರಾಮ್ ಗೋಪಾಲ್ ವರ್ಮಾ ಅವರ ಇತ್ತೀಚಿನ ಚಿತ್ರದ ಟ್ರೇಲರ್ ... ಅದ್ಭುತ" ಎಂದು ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಿರ್ದೇಶಕ "ಸರ್ಕಾರ್ ಧನ್ಯವಾದಗಳು. 'ಕಿಲ್ಲಿಂಗ್ ವೀರಪ್ಪನ್ ಸಿನೆಮಾದಿಂದ 'ಆಗ್' (ಬೆಂಕಿಗೆ) ಸ್ವಲ್ಪ ನೀರು ಸುರಿಯಲು ಸಾಧ್ಯವಾಗಿದೆ ಎಂದುಕೊಳ್ಳುತ್ತೇನೆ" ಎಂದು ಬರೆದಿದ್ದಾರೆ.

ಬಾಲಿವುಡ್ ನಟ ರಿತೇಶ್ ದೇಶಮುಖ್ ಕೂಡ ಟ್ರೇಲರ್ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದು ಅಧ್ಬುತ ಎಂದಿದ್ದಾರೆ.

ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನೆಮಾ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿದೆ. ರಂಗಭೂಮಿ ನಟ ಸಂದೀಪ್ ವೀರಪ್ಪನ್ ಪಾತ್ರ ನಿರ್ವಹಿಸಿದ್ದರೆ, ಯಜ್ಞ ಶೆಟ್ಟಿ ಮತ್ತು ಪರುಲ್ ಯಾದವ್ ಕೂಡ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com