ಹಿನ್ನಲೆ ಗಾಯಕಿಯಾದ ನಿಧಿ ಸುಬ್ಬಯ್ಯ

ಕನ್ನಡ ಸಿನೆಮಾಗಳಲ್ಲಿ ನಟಿಸಿ ಬಾಲಿವುಡ್ ಗೆ ಜಿಗಿದ ನಿಧಿ ಸುಬ್ಬಯ್ಯ 'ಓ ಮೈ ಗಾಡ್' ನಲ್ಲಿ ಬಾಲಿವುಡ್ ಪಾದಾರ್ಪಣೆ ಮಾಡಿದ್ದರು. ಈಗ ತಮ್ಮ ಕನಸಿನ ರೆಕ್ಕೆಗೆ ಮತ್ತೊಂದು ಗರಿ
ನಟಿ ನಿಧಿ ಸುಬ್ಬಯ್ಯ
ನಟಿ ನಿಧಿ ಸುಬ್ಬಯ್ಯ

ಬೆಂಗಳೂರು: ಕನ್ನಡ ಸಿನೆಮಾಗಳಲ್ಲಿ ನಟಿಸಿ ಬಾಲಿವುಡ್ ಗೆ ಜಿಗಿದ ನಿಧಿ ಸುಬ್ಬಯ್ಯ 'ಓ ಮೈ ಗಾಡ್' ನಲ್ಲಿ ಬಾಲಿವುಡ್ ಪಾದಾರ್ಪಣೆ ಮಾಡಿದ್ದರು. ಈಗ ತಮ್ಮ ಕನಸಿನ ರೆಕ್ಕೆಗೆ ಮತ್ತೊಂದು ಗರಿ ಸಿಕ್ಕಿಸಿಕೊಂಡಿರುವ ನಿಧಿ ಮತ್ತೆ ಸ್ಯಾಂಡಲ್ವುಡ್ ಗೆ ವಾಪಸಾಗಿದ್ದು ಶಿವು ಜಮಖಂಡಿ ಅವರ 'ನನ್ನ ನಿನ್ನ ಪ್ರೇಮ್ ಕಹಾನಿ' ಸಿನೆಮಾದಲ್ಲಿ ವಿಜಯ್ ರಾಘವೇಂದ್ರ ಎದುರು ನಟಿಸಲಿದ್ದಾರೆ.

ಬರೀ ನಟನೆಯಷ್ಟೇ ಅಲ್ಲ ಹಿನ್ನೆಲ ಗಾಯಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುವ ನಿಧಿ "ನಾನು ಯಾವಾಗಲೂ ಗಾಯಕಿಯಾಗಿದ್ದೆ ಆದರೆ ಸಿನೆಮಾದಲ್ಲಿ ಹಾಡುವ ಅವಕಾಶ ಸಿಕ್ಕಿರಲಿಲ್ಲ. ಈಗ ನಿರ್ದೇಶಕರು ಕೇಳಿದಾಗ ಉತ್ಸುಕಳಾದೆ" ಎನ್ನುತ್ತಾರೆ ನಟಿ.

ಇದು ಕೊನೆ ನಿಮಿಷದ ನಿರ್ಧಾರವಾಗಿತ್ತಂತೆ ಮತ್ತು ಸೋಮವಾರ ಹಾಡಿನ ಮುದ್ರಣ ಪೂರ್ಣಗೊಂಡಿದೆ "ಇದು ರಾಗಮಯವಾಗ ರೊಮ್ಯಾಂಟಿಕ್ ಹಾಡು" ಎನ್ನುತ್ತಾರೆ ನಿಧಿ.

ನಿಧಿ ಅವರ ಮೂರು ಬಾಲಿವುಡ್ ಸಿನೆಮಾಗಳು ೨೦೧೬ ರಲ್ಲಿ ಬಿಡುಗಡೆಯಾಗಲಿವೆಯಂತೆ. ಫೆಬ್ರವರಿಯಲ್ಲಿ 'ಡೈರೆಕ್ಟ್ ಇಶ್ಕ್' ನಂತರ 'ಲವ್ ಶಾಗುನ್' ಮತ್ತಿ 'ಸಾರಥಿ' ಬಿಡುಗಡೆಯಾಗಲಿವೆಯಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com