ಜಾಕ್ಸನ್ ಈ ವಾರ ತೆರೆಗೆ

ಜಾಕ್ಸನ್ ಚಿತ್ರದ ಸ್ಟಿಲ್
ಜಾಕ್ಸನ್ ಚಿತ್ರದ ಸ್ಟಿಲ್
Updated on

ದುನಿಯಾ ವಿಜಯ್ ಅವರ ಬಹು ನಿರೀಕ್ಷಿತ ಚಿತ್ರ 'ಜಾಕ್ಸನ್' ಇದೇ ೧೫ಕ್ಕೆ ಸಂಕ್ರಾಂತಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ವಿಜಯ್ ಹಾಗೂ ವೃಂದ (ಪಾವನಿ) ಮುಖ್ಯ ತಾರಾಗಣದ `ಜಾಕ್ಸನ್' ಚಿತ್ರಕ್ಕೆ 35 ದಿವಸಗಳ ಮಾತಿನ ಭಾಗದ ಚಿತ್ರೀಕರಣ ಮಾಡಲಾಗಿದೆ. ಅರ್ಜುನ್ ಜನ್ಯ ಅವರ ಹಾಡುಗಳು ಇತ್ತೀಚಿಗೆ ಬಿಡುಗಡೆ ಆಗಿ ಅಪಾರ  ಕೇಳುಗರನ್ನು ಸಂಪಾದಿಸಿಕೊಂಡಿದೆ. ದುನಿಯ ಟಾಕೀಸ್ ಅರ್ಪಿಸುವ, ಕೆ ಪಿ ಎಸ್ ಕಂಬೈನ್ಸ್ ಚಿತ್ರ `ಜಾಕ್ಸನ್'.

ಸುಂದರ್ ಗೌಡ್ರು `ಜಾಕ್ಸನ್' ಚಿತ್ರದ ನಿರ್ಮಾಪಕರು. ತಮಿಳಿನ `ಇದಕುತಾನ ಆಸೈ ಪಟ್ಟೈ ಬಾಲಕುಮರ' ಚಿತ್ರದ ರೀಮೇಕ್ ಈ `ಜಾಕ್ಸನ್'.

ಈ ಮೊದಲು ಸಂಕಲನಕಾರ ಆಗಿದ್ದ ಸನತ್ ಕುಮಾರ್ ಚಿತ್ರದ ನಿರ್ದೇಶಕ. ರಂಗಾಯಣ ರಘು, ನಾಗೇಂದ್ರ ಶಾ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com