ಬಿಗ್ ಬಿ ಕಂಠದಲ್ಲಿ ರಾಷ್ಟ್ರಗೀತೆ

ಇತ್ತಿಚೆಗಷ್ಟೇ ಪದ್ಮವಿಭೂಷಣ ಪಡೆದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಭಾರತದ ರಾಷ್ಟ್ರಗೀತೆಯನ್ನು
ಅಮಿತಾಬ್ ಬಚ್ಚನ್
ಅಮಿತಾಬ್ ಬಚ್ಚನ್

ಮುಂಬೈ: ಇತ್ತಿಚೆಗಷ್ಟೇ ಪದ್ಮವಿಭೂಷಣ ಪಡೆದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಭಾರತದ ರಾಷ್ಟ್ರಗೀತೆಯನ್ನು ಹಾಡಿದ್ದಾರೆ ಹಾಗೆ ಅದಕ್ಕೆ ವಿಡಿಯೋ ಒಂದನ್ನು ಕೂಡ ಚಿತ್ರೀಕರಣ ಮಾಡಿದ್ದಾರೆ.

ಎರೋಸ್ ಇಂಟರ್ನ್ಯಾಷನಲ್ ನಿರ್ಮಿಸಿರುವ ಈ ದೃಷ್ಯಾವಳಿಯನ್ನು ರಾಷ್ಟ್ರಗೀತೆ ರಚಿಸಿ ಅದಕ್ಕೆ ಸಂಗೀತ ಸಂಯೋಜಿಸಿದ ರಬೀಂದ್ರನಾಥ್ ಟ್ಯಾಗೋರ್ ಅವರ ಕೊಲ್ಕತ್ತಾದ  ಪೂರ್ವಜರ ಮನೆಯಲ್ಲಿ ಚಿತ್ರೀಕರಣ ಮಾಡಲಾಗಿದೆ.

ತಮ್ಮ ಮುಂಬರುವ ಸಿನೆಮಾ ಶಮಿತಾಬ್ ಸೇರಿದಂತೆ ಅಮಿತಾಬ್ ಬಚ್ಚನ್ ಹಲವಾರು ಸಿನೆಮಾಗಳಲ್ಲಿ ಈ ಹಿಂದೆ ಹಾಡಿದ್ದಾರೆ.

ಜನವರಿ ೨೬ ರಂದು ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಗೀತೆಯ ಈ ವಿಡಿಯೋ ಬಿಡುಗಡೆಯಾಗಿದೆ. "ಕೊಲ್ಕತ್ತಾದ ಥಾಕೂರ್ ಬಾಡಿಯಾ ಜೋರಸಂಕೊ, ಟ್ಯಾಗೋರ್ ಅವರ ಮನೆಯಲ್ಲಿ ಚಿತ್ರೀಕರಣಗೊಂಡ ನಾನು ಹಾಡಿರುವ ರಾಷ್ಟ್ರಗೀತೆ" ಎಂದು ಅಮಿತಾಬ್ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಪ್ರಶಸ್ತಿಗಳ ಮೇಲೆ ಟ್ಯಾಗೋರ್ ಅವರು ನೀಡಿದ ಹೇಳಿಕೆಯನ್ನು ಅವರು ಟ್ವೀಟ್ ಮಾಡಿದ್ದಾರೆ. "ಟ್ಯಾಗೋರ್ ಹೇಳಿದ್ದಾರೆ: ನಿಮ್ಮ ಗುರುತುಗಳನ್ನು, ಗಾಯಗಳನ್ನು, ತಪ್ಪುಗಳನ್ನು ಮತ್ತು ಸೋಲುಗಳನ್ನು ಮರೆಮಾಚುವುವು ಪ್ರಶಸ್ತಿಗಳು ಹಾಗೂ ಗುರಿಯ ಬದಲು ಮಾರ್ಗವನ್ನು ಒಪ್ಪಿಕೊಳ್ಳುವಂತೆ ಮಾಡುತ್ತವೆ" ಎಂದು ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com