ಖಾಲಿ ಖಾಲಿ ‘ಉಪ್ಪಿ-2’ ಪೋಸ್ಟರ್

ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಬಹುನಿರೀಕ್ಷಿತ ‘ಉಪ್ಪಿ 2’ ಚಿತ್ರದ ಪೊಸ್ಟರ್ ಅನ್ನು ತಮ್ಮದೇ ಸ್ಟೈಲ್ ನಲ್ಲಿ ಸೈಲೆಂಟಾಗೆ ಬಿಡುಗಡೆ ಮಾಡಿದ್ದಾರೆ...
ಉಪ್ಪಿ2 ಪೋಸ್ಟರ್
ಉಪ್ಪಿ2 ಪೋಸ್ಟರ್

ಬೆಂಗಳೂರು: ಸ್ಯಾಂಡಲ್‍ವುಡ್ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಬಹುನಿರೀಕ್ಷಿತ ‘ಉಪ್ಪಿ 2’ ಚಿತ್ರದ ಪೊಸ್ಟರ್ ಅನ್ನು ತಮ್ಮದೇ ಸ್ಟೈಲ್ ನಲ್ಲಿ ಸೈಲೆಂಟಾಗೆ ಬಿಡುಗಡೆ ಮಾಡಿದ್ದಾರೆ.

ಮತ್ತೊಮ್ಮೆ ತಮ್ಮ ಕ್ರಿಯೆಟಿವಿಟಿಯನ್ನು ತೋರಿಸಿರುವ ಉಪೇಂದ್ರ ಉಪ್ಪಿ2ನ ಖಾಲಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಪೋಸ್ಟರ್ ತುಂಬ ಖಾಲಿಯಾಗಿದ್ದು, ಕೇವಲ "ಹಾಡುಗಳ ಬಿಡುಗಡೆ 17-07-2015 ರಂದು" ದಿನಾಂಕ ಮತ್ತು ಚಿತ್ರದ ಹೆಸರನ್ನು ಚಿಕ್ಕದಾಗಿ ಕಾಣುವಂತೆ ಮಾಡಿ ಇಡೀ ಪೊಸ್ಟರ್ ಖಾಲಿ ಇರುವಂತೆ ಮಾಡಿದ್ದಾರೆ.

ಉಪ್ಪಿ-2 ಎಂದು ಚಿತ್ರಕ್ಕೆ ಹೆಸರಿಡುವುದರಿಂದ ಹಿಡಿದು ‘ನೀನು unknowನು’ ಎಂದು ಟ್ಯಾಗ್ ಲೈನ್ ನೀಡಿ ಅಭಿಮಾನಿಗಳ ಕುತೂಹಲ ಕೆರಳಿಸಿದ್ದರು. ಈಗ ಖಾಲಿ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರದ ಕುರಿತು ಭಾರಿ ನಿರೀಕ್ಷೆ ಹುಟ್ಟುಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com