ರಮ್ಯಾ 'ದಿಲ್ ಕ ರಾಜ'ಗೆ ಬಾಹುಬಲಿ ಸಿನೆಮ್ಯಾಟೋಗ್ರಾಫರ್

ಪ್ರಜ್ವಲ್ ದೇವರಾಜ್ ಮತ್ತು ರಮ್ಯಾ ಅಭಿನಯದ 'ದಿಲ್ ಕ ರಾಜ' ಸಿನೆಮಾಗೆ ಮತ್ತೆ ಜೀವ ಬಂದಿದೆ. ಈ ಯೋಜನೆಗೆ ಬಾಬುಬಲಿ ಸಿನೆಮ್ಯಾಟೋಗ್ರಾಫರ್ ಸೆಂಥಿಲ್
'ದಿಲ್ ಕ ರಾಜಾ' ಸಿನೆಮಾದ ದೃಶ್ಯದಲ್ಲಿ ನಟಿ ರಮ್ಯಾ
'ದಿಲ್ ಕ ರಾಜಾ' ಸಿನೆಮಾದ ದೃಶ್ಯದಲ್ಲಿ ನಟಿ ರಮ್ಯಾ

ಬೆಂಗಳೂರು: ಪ್ರಜ್ವಲ್ ದೇವರಾಜ್ ಮತ್ತು ರಮ್ಯಾ ಅಭಿನಯದ 'ದಿಲ್ ಕ ರಾಜ' ಸಿನೆಮಾಗೆ ಮತ್ತೆ ಜೀವ ಬಂದಿದೆ. ಈ ಯೋಜನೆಗೆ ಬಾಬುಬಲಿ ಸಿನೆಮ್ಯಾಟೋಗ್ರಾಫರ್ ಸೆಂಥಿಲ್ ಕುಮಾರ್ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ ಎಂದಿದ್ದಾರೆ ನಿರ್ದೇಶಕ-ನಿರ್ಮಾಪಕ ಸೋಮನಾಥ್ ಪಾಟಿಲ್.

"ಇದು ಈ ದಶಕದ ಅತಿ ಯಶಸ್ವಿ ಚಿತ್ರ ಮತ್ತು ಈ ಅದ್ಭುತ ಕ್ಯಾಮರಾಮ್ಯಾನ್ ಜೊತೆ ಕೆಲಸ ಮಾಡುವ ಸೌಭಾಗ್ಯ ನನಗೆ ದೊರಕಿದೆ" ಎಂದು 'ದಿಲ್ ಕಾ ರಾಜ' ದ ಟ್ರೇಲರ್ ಬಿಡುಗಡೆ ಸಮಯದಲ್ಲಿ ಅವರು ತಿಳಿಸಿದ್ದಾರೆ.

"ಬಾಹುಬಲಿ ದೃಶ್ಯ ವೈಭವ" ಎನ್ನುವ ಅವರು ತಮ್ಮ ಸಿನೆಮಾ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ನಿರಾಕರಿಸಿದ್ದಾರೆ. "ಹೆಚ್ಚಿನ ವಿವರಗಳನ್ನು ನೀಡಲು ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ. ಚಿತ್ರೀಕರಣ ಸಂಪೂರ್ಣಗೊಳಿಸಲು ರಮ್ಯಾ ಅವರು ಸಮಯ ನೀಡುತ್ತಾರೋ ಇಲ್ಲವೋ ಗೊತ್ತಿಲ್ಲ" ಎಂದಿದ್ದಾರೆ.

೨೦೧೩ರಲ್ಲಿ ಚಿತ್ರೀಕರಣ ಪ್ರಾರಂಭವಾದರೂ ಇನ್ನು ಮುಗಿಯದ ಈ ಸಿನೆಮಾ, ಈಗ ರಮ್ಯಾ ಅವರ ಅನುಪಸ್ಥಿತಿಯಲ್ಲಿಯೇ ಚಿತ್ರ ಸಂಪೂರ್ಣವಾಗುವುದೇ ಎಂಬುದನ್ನು ಕಾಲವೇ ತಿಳಿಸಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com