'ಬಿಗ್ ಬಾಸ್' ಸುದೀಪ್‌ಗೆ ರು.20 ಕೋಟಿ ಸಂಭಾವನೆ?

ಕಳೆದೆರಡು ಬಾರಿ ಜನಪ್ರಿಯ ರಿಯಾಲಿಟಿ ಶೋಬಿಗ್ ಬಾಸ್ ಮೂಲಕ ತಮ್ಮ ನಿರೂಪಣೆಯ ಖದರ್ ಪ್ರದರ್ಶಿಸಿದ ನಟ ಕಿಚ್ಚ ಸುದೀಪ್ 'ಬಿಗ್ ಬಾಸ್' ನ ಮೂರನೇ...
ಸುದೀಪ್
ಸುದೀಪ್

ಬೆಂಗಳೂರು: ಕಳೆದೆರಡು ಬಾರಿ ಜನಪ್ರಿಯ ರಿಯಾಲಿಟಿ ಶೋಬಿಗ್ ಬಾಸ್ ಮೂಲಕ ತಮ್ಮ ನಿರೂಪಣೆಯ ಖದರ್ ಪ್ರದರ್ಶಿಸಿದ ನಟ ಕಿಚ್ಚ ಸುದೀಪ್ 'ಬಿಗ್ ಬಾಸ್' ನ ಮೂರನೇ ಅವತರಿಣಿಕೆಯಲ್ಲಿಯೂ ತಮ್ಮ ನಿರೂಪಣಾ  ಪ್ರತಿಭೆಯನ್ನು ಪ್ರದರ್ಶಿಸಲಿದ್ದು ಈ ಸೀಜನ್ ಗೆ ಸುದೀಪ್ ಪಡೆಯಲಿರುವ ಸಂಭಾವನೆ ಮಾತ್ರ ಹುಬ್ಬೇರಿಸುವಂತೆ ಮಾಡಿದೆ.

 ಈ ಬಾರಿಯಷ್ಟೇ ಅಲ್ಲದೇ, ಕಲರ್ಸ್‌ನಲ್ಲಿ ಪ್ರಸಾರವಾಗುವ ಮುಂದಿನ ಐದೂ ಸೀಸನ್‌ಗಳನ್ನೂ ಸುದೀಪ್ ಅವರೇ  ನಡೆಸಿಕೊಡಲಿದ್ದಾರೆ. ಈಗಾಗಲೇ ಈ ವಿಷಯವಾಗಿ ಅಗ್ರಿಮೆಂಟ್‌ ಕೂಡಾ ಆಗಿದ್ದು, ಮುಂದಿನ ಐದು ಸೀಸನ್‌ಗಳನ್ನು ನಿರೂಪಿಸುವುದಕ್ಕೆ ಸುದೀಪ್‌ ಪಡೆದಿರುವ ಸಂಭಾವನೆ 20 ಕೋಟಿ ರು.ಗೂ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com