ಉಪ್ಪಿ-೨ ಆಡಿಯೋ ಬಿಡುಗಡೆ ಧಮಾಕಾ

ನಟ ನಿರ್ದೇಶಕ ಉಪೇಂದ್ರ ಅವರ ಅಭಿಮಾನಿಗಳ ಜೊತೆ ರುಪ್ಪೀಸ್ ರೆಸಾರ್ಟ್ ನಲ್ಲಿ ಉಪ್ಪಿ-೨ ಸಿನೆಮಾದ ಆಡಿಯೋ ವೈಭವಯುತವಾಗಿ ಅನಾವರಣಗೊಂಡಿತು.
ಉಪ್ಪಿ-೨ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಉಪೇಂದ್ರ
ಉಪ್ಪಿ-೨ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕಿದ ಉಪೇಂದ್ರ
Updated on

ಬೆಂಗಳೂರು: ನಟ ನಿರ್ದೇಶಕ ಉಪೇಂದ್ರ ಅವರ ಅಭಿಮಾನಿಗಳ ಜೊತೆ ರುಪ್ಪೀಸ್ ರೆಸಾರ್ಟ್ ನಲ್ಲಿ ಉಪ್ಪಿ-೨ ಸಿನೆಮಾದ ಆಡಿಯೋ ವೈಭವಯುತವಾಗಿ ಅನಾವರಣಗೊಂಡಿತು. ರಮೇಶ್ ದೇಂಬ್ಲಾ ಅವರ ನಿರ್ದೇಶನದಲ್ಲಿ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ ಫ್ಯಾಶನ್ ಶೋ ನಡೆಸಿದ್ದು ನೆರೆದಿದ್ದವರ ಕಣ್ಮನ ಸೆಳೆಯಿತು. ಹಾಗೆಯೇ ತಮ್ಮ ನಿರ್ದೇಶನದ ಈ ಚಿತ್ರದ ಎರಡು ಹಾಡುಗಳಿಗೆ ಹೆಜ್ಜೆ ಹಾಕುವ ಮೂಲಕ ಉಪೇಂದ್ರ ತಮ್ಮ ಅಭಿಮಾನಿಗಳನ್ನು ರಂಜಿಸಿದರು.

ಗುರುಕಿರಣ್ ಸಂಗೀತ ನಿರ್ದೇಶನದ ಹಾಡುಗಳು ರೇಡಿಯೋ ಚಾನಲ್ ಗಳಲ್ಲಿ ಅತಿ ಹೆಚ್ಚು ಜನಪ್ರಿಯವಾಗಿವೆಯಂತೆ. ಹಲವು ವರ್ಷಗಳ ನಂತರ ಈ ಜೋಡಿ ಒಂದಾಗಿದ್ದು ಸಿನೆಮಾ ಬಗ್ಗೆ ಕುತೂಹಲ ಇಮ್ಮಡಿಸಿದೆಯಂತೆ. ಅದರಲ್ಲಿ 'ಎಲ್ಲರ ಕಾಲ್ ಎಳಿತದೆ ಕಾಲ' ಎಂಬ ಹಾಡು ವೈರಲ್ ಆಗುತ್ತಿದೆ ಎನ್ನುತ್ತದೆ ಚಿತ್ರತಂಡ. ಉಪೇಂದ್ರ ಅವರೇ ಹಾಡಿರುವ ಈ ಹಾಡಿನಲ್ಲಿ ಕನ್ನಡ ಚಿತ್ರೋದ್ಯಮದ ಸ್ಥಿತಿಗತಿಗಳನ್ನು ಲೇವಡಿ ಮಾಡುವ ಮೂಲಕ ಹಾಸ್ಯ ಲೇಪನ ಹಚ್ಚಿದ್ದಾರಂತೆ.

ಉಪ್ಪಿ-೨ ಸಿನೆಮಾದ ಒಂದು ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಹಾಡಿದ್ದಾರೆ. ವಿಜಯ್ ಪ್ರಕಾಶ್, ಚೈತ್ರ ನಿತಿನ್, ರಾಜಾರಾಂ ಶಾಸ್ತ್ರಿ ಇತರ ಗಾಯಕರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com