ಭಾರತದಲ್ಲಿ 'ಎವರೆಸ್ಟ್' ಬಿಡುಗಡೆ ಸೆಪ್ಟಂಬರ್ ನಲ್ಲಿ

ನಿಜ ಘಟನೆಯ ಆಧಾರಿತ ಯೂನಿವರ್ಸಲ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸಿರುವ 'ಎವರೆಸ್ಟ್' ಸೆಪ್ಟಂಬರ್ ನಲ್ಲಿ ೩ಡಿ ಮಾಧ್ಯಮದಲ್ಲಿ ಭಾರತದಲ್ಲಿ
'ಎವರೆಸ್ಟ್' ಸಿನೆಮಾದ ಒಂದು ದೃಶ್ಯ
'ಎವರೆಸ್ಟ್' ಸಿನೆಮಾದ ಒಂದು ದೃಶ್ಯ
Updated on

ನವದೆಹಲಿ: ನಿಜ ಘಟನೆಯ ಆಧಾರಿತ ಯೂನಿವರ್ಸಲ್ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ನಿರ್ಮಿಸಿರುವ 'ಎವರೆಸ್ಟ್' ಸೆಪ್ಟಂಬರ್ ನಲ್ಲಿ ೩ಡಿ ಮಾಧ್ಯಮದಲ್ಲಿ ಭಾರತದಲ್ಲಿ ಬಿಡುಗಡೆಯಾಗಿದೆ.

"ಪರ್ವತಾರೋಹಿಗಳ ತಂಡವೊಂದು ಮೌಂಟ್ ಎವರೆಸ್ಟ್ ಏರುವಾಗ ನಡೆಯುವ ಥ್ರಿಲ್ ನೀಡುವ ಘಟನೆಗಳನ್ನು ಸೆಪ್ಟಂಬರನಲ್ಲಿ ಪ್ರೇಕ್ಷಕರು ನೋಡಲಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.

೧೯೯೬ರಲ್ಲಿ ಮೌಂಟ್ ಎವರೆಸ್ಟ್ ನಲ್ಲಿ ನಡೆದ ದುರ್ಘಟನೆಯನ್ನು ಆಧರಿಸಿದ ಈ ಸಿನೆಮಾವನ್ನು ಬಲ್ಟಾಸಾರ್ ಕಾರ್ಮಕೂರ್ ನಿರ್ದೇಶಿಸಿದ್ದು ಜೇಸನ್ ಕ್ಲಾರ್ಕ್, ಜೋಶ ಬ್ರಾಲಿನ್, ಜಾನ್ ಹಾಕ್ಸ್, ಕೀರಾ ನೈಟ್ಲಿ ಮತ್ತು ಜೆಕ್ ಜಿಲ್ಲೆನ್ಹಾಲ್ ನಟಿಸಿದ್ದಾರೆ.

ನೇಪಾಳ, ರೋಮ್ ಮತ್ತು ಬ್ರಿಟನ್ ನಲ್ಲಿ ಚಿತ್ರೀಕರಣ ನಡೆದಿದ್ದು ಪರ್ವತಾರೋಹಿಗಳ ಕಷ್ಟಕೋಟಲೆಯನ್ನು ಸಿನೆಮಾ ಬಿಂಬಿಸಿದೆ ಎನ್ನಲಾಗಿದೆ.

ಟ್ರೇಲರ್ ಇಲ್ಲಿದೆ ನೋಡಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com