ಸುದೀಪ್‌ ಹೆಬ್ಬುಲಿಗೆ ದೇವಿಶ್ರೀ ಪ್ರಸಾದ್ ಸಂಗೀತ?

ಸುದೀಪ್ ಅಭಿನಯದ ರನ್ನ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್...
ಸುದೀಪ್, ದೇವಿಶ್ರೀ ಪ್ರಸಾದ್
ಸುದೀಪ್, ದೇವಿಶ್ರೀ ಪ್ರಸಾದ್
Updated on: 

ಸುದೀಪ್ ಅಭಿನಯದ ರನ್ನ ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಪೂರ್ಣ ಪ್ರಮಾಣದಲ್ಲಿ ಸುದೀಪ್ ಚಿತ್ರವೊಂದಕ್ಕೆ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಯಶ್ ಅಭಿನಯದ ಗಜಕೇಸರಿ ಚಿತ್ರವನ್ನು ನಿರ್ದೇಶಿಸಿ ಮೊದಲ ಚಿತ್ರದಲ್ಲೇ ಯಶಸ್ಸು ಕಂಡಿರುವ ಛಾಯಾಗ್ರಾಹಕ ಎಸ್. ಕೃಷ್ಣ ಮತ್ತೊಂದು ಚಿತ್ರ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಅದೇ ಹೆಬ್ಬುಲಿ ಚಿತ್ರ. ಈ ಚಿತ್ರದಲ್ಲಿ ಸುದೀಪ್ ನಟಿಸಲಿದ್ದು, ಎಸ್.ಆರ್.ವಿ ಪ್ರೊಡಕ್ಷನ್ಸ್ ನಡಿ ರಘುನಾಥ್ ನಿರ್ಮಿಸುತ್ತಿದ್ದಾರೆ. ಯುವಕರ ಹಾರ್ಟ್ ಬೀಟ್ ಮಿಡಿಯುವಂತ ರಿದಮಿಂಗ್ ಹಾಗೂ ಮೆಲೋಡಿ ಸಾಂಗ್ ಗಳ ಕಂಪೋಸರ್ ಸೌತ್ ರಾಕಿಂಗ್ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀ ಪ್ರಸಾದ್ ಸಂಗೀತ ಸಂಯೋಜಿಸುತ್ತಿದ್ದಾರೆ.

ಕನ್ನಡಕ್ಕೆ ದೇವಿಶೀ ಪ್ರಸಾದ್ ಹೊಸಬರೇನಲ್ಲ ಈ ಹಿಂದೆ ಗಣೇಶ್ ಅಭಿನಯದ ಸಂಗಮ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದರು. ಏಳು ವರ್ಷಗಳ ಬಳಿಕ ಮತ್ತೆ ಕನ್ನಡಕ್ಕೆ ಬರುತ್ತಿದ್ದಾರೆ. ಹೆಬ್ಬುಲಿ ಚಿತ್ರಕ್ಕೆ ಕೃಷ್ಣ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ಚಿತ್ರೀಕರಣ ಜೂನ್ 7ಕ್ಕೆ ಶುರುವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com