ಕಮಲ ಹಾಸನ್ ಅವರ 'ತೂಂಗಾವಾನಮ್', 'ಸ್ಲೀಪ್ಲೆಸ್ ನೈಟ್' ರಿಮೇಕ್

ನಟ ನಿರ್ದೇಶಕ ಕಮಲ ಹಾಸನ್ ಅವರ ಮುಂದಿನ ಸಿನೆಮಾ ತಮಿಳು-ತೆಲಗು ಥ್ರಿಲ್ಲರ್ 'ತೂಂಗಾವಾನಮ್' ಫ್ರೆಂಚ್ ಸಿನೆಮಾ 'ನ್ಯೂ ಬ್ಲಾಂಚ್' ಅಥವಾ 'ಸ್ಲೀಪ್ಲೆಸ್ ನೈಟ್' ನ
ನಟ ನಿರ್ದೇಶಕ ಕಮಲ ಹಾಸನ್
ನಟ ನಿರ್ದೇಶಕ ಕಮಲ ಹಾಸನ್
Updated on

ಚೆನ್ನೈ: ನಟ ನಿರ್ದೇಶಕ ಕಮಲ ಹಾಸನ್ ಅವರ ಮುಂದಿನ ಸಿನೆಮಾ ತಮಿಳು-ತೆಲಗು ಥ್ರಿಲ್ಲರ್ 'ತೂಂಗಾವಾನಮ್' ಫ್ರೆಂಚ್ ಸಿನೆಮಾ 'ನ್ಯೂ ಬ್ಲಾಂಚ್' ಅಥವಾ 'ಸ್ಲೀಪ್ಲೆಸ್ ನೈಟ್' ನ ರಿಮೇಕ್ ಎನ್ನಲಾಗಿದೆ.

"ಕಮಲ್ ಅವರ 'ತೂಂಗಾವಾನಮ್' ವಿದೇಶಿ ಸಿನೆಮಾವೊಂದರ ರಿಮೇಕ್. ಆದರೆ ಇದು ಯಾವ ಸಿನೆಮಾದ ರಿಮೇಕ್ ಎಂದು ಸ್ಪಷ್ಟವಾಗಿ ತಿಳಿದಿಲ್ಲ. ಚಿತ್ರದ ಬಿಡುಗಡೆಗೆ ಮುಂಚೆ ಕಮಲ್ ಅವರೇ ತಿಳಿಸಲಿದ್ದಾರೆ" ಎಂದು ಮೂಲಗಳು ತಿಳಿಸಿವೆ.

ಇನ್ನೊಂದು ಮೂಲದ ಪ್ರಕಾರ ಇದು 'ಸ್ಲೀಪ್ಲೆಸ್ ನೈಟ್' ಸಿನೆಮಾದ ರಿಮೇಕ್ ಎಂದು ತಿಳಿದುಬಂದಿದೆ.

ಫ್ರೆಡೆರಿಕ್ ಜಾರ್ಡಿನ್ ಅವರ ನಿರ್ದೇಶನದ ಈ ಸಿನೆಮಾ ೨೦೧೧ರಲ್ಲಿ ಬಿಡುಗಡೆಯಾಗಿತ್ತು. ಪೊಲೀಸನೊಬ್ಬ ತನ್ನ ಮಗ ಮತ್ತು ತನ್ನ ಕೀರ್ತಿಯನ್ನು ಒಂದು ರಾತ್ರಿ ಉಳಿಸಿಕೊಳ್ಳಲು ಒದ್ದಾಡುವ ಕಥಾಹಂದರವನ್ನು ಸಿನೆಮಾ ಹೊಂದಿದೆ.

'ತೂಂಗಾವಾನಮ್' ಸಿನೆಮಾ ಕೂಡ ಬಾರ್ ಒಂದರಲ್ಲಿ ಒಂದು ರಾತ್ರಿ ನಡೆಯುವ ಕಥೆ ಹಾಗು ಕಮಲ್ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ.

ಮೂಲ ಸಿನೆಮಾದಲ್ಲಿ ಕೆಲಸ ಮಾಡಿದ್ದ ಫ್ರೆಂಚ್ ಸ್ಟಂಟ್ ತಂತ್ರಜ್ಞರಾದ ಗಿಲ್ಲ್ಸ್ ಕಾನ್ಸೀಲ್, ಸಿಲ್ವೇನ್ ಗಾಬೇಟ್ ಮತ್ತು ವರ್ಜಿನ್ ಅರ್ನಡ್ ಅವರುಗಳನ್ನು ತಮಿಳು-ತೆಲಗು ಸಿನೆಮಾದಲ್ಲೂ ಕೆಲಸ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ರಾಜೀವ್ ಸೆಲ್ವಾ ನಿರ್ದೇಶನದ ಈ ಸಿನೆಮಾದಲ್ಲಿ ತ್ರಿಶಾ ಕೃಷ್ಣ, ಪ್ರಕಾಶ್ ರಾಜ್, ಸಂಪತ್ ರಾಜ್, ಕಿಶೋರ್, ಮಧು ಶಾಲಿನಿ, ಉಮಾ ರಿಯಾಜ್ ಮತ್ತು ಯುಗಿ ಸೇತು ಕೂಡ ಅಭಿನಯಿಸುತ್ತಿದ್ದಾರೆ. ಕಮಲ್ ಹಾಸನ್ ಅವರೇ ನಿರ್ಮಿಸುತ್ತಿರುವ ಈ ಸಿನೆಮಾದ ತೆಲುಗು ಶೀರ್ಷಿಕೆ 'ಚೀಕಟಿ ರಾಜ್ಯಂ'.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com