ಚಾರ್ಮಿಯ ಕೋಟಿ ಕುಣಿತ

ಚಾರ್ಮಿ ಚಾಮರ್ï ಕಳ್ಕೊಂಡು ಯಾವ ಕಾಲ ಆಯ್ತು ಅಂತ ಜನ ಮಾತಾಡ್ಕೊಳೋ ಹೊತ್ತಿಗೆ ಭರ್ಜರಿ ಕಂಬ್ಯಾಕ್ ಮಾಡಲು ತಯಾರಾಗಿದ್ದಾಳೆ ಚಾರ್ಮಿ ಕೌರ್! ತೆಲುಗಿನಲ್ಲಿ ಜ್ಯೋತಿಲಕ್ಷ್ಮಿ ಎಂಬ...
ಚಾರ್ಮಿ ಕೌರ್
ಚಾರ್ಮಿ ಕೌರ್

ಚಾರ್ಮಿ ಚಾರ್ಮ್ ಕಳ್ಕೊಂಡು ಯಾವ ಕಾಲ ಆಯ್ತು ಅಂತ ಜನ ಮಾತಾಡ್ಕೊಳೋ ಹೊತ್ತಿಗೆ ಭರ್ಜರಿ ಕಂಬ್ಯಾಕ್ ಮಾಡಲು ತಯಾರಾಗಿದ್ದಾಳೆ ಚಾರ್ಮಿ ಕೌರ್! ತೆಲುಗಿನಲ್ಲಿ ಜ್ಯೋತಿಲಕ್ಷ್ಮಿ ಎಂಬ ಚಿತ್ರದಲ್ಲಿ ಈಕೆ ನಟಿಸುತ್ತಿರುವ ಸುದ್ದಿ ಗೊತ್ತಿರಬಹುದು.

ತೆಲುಗು ಪ್ರೇಕ್ಷಕರು ಈಗಲೇ ಬಾಯಲ್ಲಿ ನೀರೂರಿಸಿಕೊಂಡು ಆ ಚಿತ್ರಕ್ಕಾಗಿ ಕಾದು ಕೂತಿದ್ದಾರೆ. ಅಂದಕಾಲತ್ತಿಲ್ ಕ್ಯಾಬರೆ ನಟಿ ಜ್ಯೋತಿಲಕ್ಷ್ಮಿ ಜೀವನ ಆಧರಿಸಿದ ಚಿತ್ರ ಅದು. ಸದ್ಯದ ಸುದ್ದಿ ಏನಂದ್ರೆ ಚಾರ್ಮಿ ತಮಿಳು ಚಿತ್ರದ ಐಟಮ್ ಸಾಂಗೊಂದಕ್ಕೆ ಸ್ಟೆಪ್ ಹಾಕಿರುವುದು ಹಾಗೂ ಒಂದು ಹಾಡಿಗಾಗಿ ಮೂವತ್ತು ಲಕ್ಷ ಸಂಭಾವನೆ ಪಡೆದಿರುವುದು!

ಹೌದು ಘಜಿನಿ, ಕತ್ತಿ ಖ್ಯಾತಿಯ ಮುರುಗದಾಸ್ ನಿರ್ಮಾಣದ ವಿಜಯ್  ಮಿಲ್ಟನ್ ನಿರ್ದೇಶನದ 10 ಎನ್ರಾದುಕುಲ್ಲ ಚಿತ್ರದಲ್ಲಿ ಚಾರ್ಮಿಯ ಐಟಮ್ ಸಾಂಗ್ ಮಹತ್ವದ ಪಾತ್ರ ವಹಿಸುತ್ತದಂತೆ. ಒಂಬತ್ತು ನಿಮಿಷದ ಈ ಹಾಡು-ಕುಣಿತಕ್ಕೆ ಬರೋಬ್ಬರಿ ಮೂರು ಕೋಟಿ ವೆಚ್ಚ ಮಾಡಲಾಗಿದೆಯಂತೆ. ವಿಕ್ರಮ್ ಮತ್ತು ಸಮಂತಾ ಮುಖ್ಯಪಾತ್ರದಲ್ಲಿರುವ ಈ ಚಿತ್ರ, ರೋಡ್ ಥ್ರಿಲ್ಲರ್ ಆಗಿದ್ದು, ಇಮ್ಮಾನ್ ಸಂಗೀತದಲ್ಲಿ ತುಂಬ ವಿಭಿನ್ನವಾದ ಹಾಡನ್ನು ಕಂಪೋಸ್ ಮಾಡಿಸಲಾಗಿದೆಯಂತೆ. ಇದೊಂದೇ ಹಾಡಿನಿಂದ ಚಾರ್ಮಿ ತಮಿಳಿನಲ್ಲಿ ಕ್ರೇಜ್ ಸೃಷ್ಟಿಸಿದರೂ ಅಚ್ಚರಿಯಿಲ್ಲ ಎನ್ನುತ್ತಿದೆ ವಿಜಯ್ ಮಿಲ್ಟನ್ ಮತ್ತು ಟೀಮ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com